ದೆಹಲಿ ಗಲಭೆ: ತಾಹಿರ್ ಹುಸೈನ್ ಸಹೋದರ ಸೇರಿ ಮೂವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Prasthutha|

ನವದೆಹಲಿ: ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೂವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ತನಿಖಾ ಸಂಸ್ಥೆಯು ಅಧಿಕೃತವಾಗಿ ಸಲ್ಲಿಸಿರುವ ಸಾಕ್ಷ್ಯಗಳು ಆರೋಪಿಗಳ ವಿರುದ್ಧ ಆರೋಪ ನಿಗದಿ ಪಡಿಸಲಾರದಷ್ಟು ದಯನೀಯವಾಗಿವೆ ಎಂದ ದೆಹಲಿ ನ್ಯಾಯಾಲಯವು, ಮೂವರು ಆರೋಪಿಗಳಾದ ರಾಶಿಫ್ ಸೈಫಿ, ಶಾದಾಬ್ ಮತ್ತು ಮಾಜಿ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಅವರ ಸಹೋದರ ಶಾ ಆಲಂ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

- Advertisement -


ದೆಹಲಿಯ ಮುಸ್ಲಿಂ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ದಾಖಲಾಗಿದ್ದ ಎಫ್‌ ಐಆರ್‌ ಕುರಿತು ಸರಿಯಾದ ತನಿಖೆ ನಡೆಸಲು ವಿಫಲರಾಗಿದ್ದಕ್ಕಾಗಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. “ದೆಹಲಿಯ ವಿಭಜನೆಯ ನಂತರ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕೋಮು ಗಲಭೆ ಇದಾಗಿದ್ದು, ಇಂತಹ ಘಟನೆಗಳಲ್ಲಿ ಇತ್ತೀಚಿನ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಸರಿಯಾದ ತನಿಖೆಯನ್ನು ನಡೆಸುವಲ್ಲಿ ತನಿಖಾ ಸಂಸ್ಥೆಯ ವೈಫಲ್ಯವು ಖಂಡಿತವಾಗಿಯೂ ಪ್ರಜಾಪ್ರಭುತ್ವದ ರಕ್ಷಕನಾಗಿರುವ ನ್ಯಾಯಾಂಗಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಹೇಳಿದರು.


ದೆಹಲಿ ಗಲಭೆಯ ಸಮಯದಲ್ಲಿ ಅಂಗಡಿಯನ್ನು ಸುಟ್ಟ, ದಾಳಿ ಮತ್ತು ಲೂಟಿ ಮಾಡಿದ ಆರೋಪದಲ್ಲಿ ಎಫ್ಐಆರ್ ಅನ್ನು ಐಪಿಸಿಯ ಸೆಕ್ಷನ್ 147, 148, 149, 427, 380, 454, 436, 435 ಮತ್ತು 120-ಬಿಯಡಿ ಎರಡು ದೂರುಗಳ ಆಧಾರದ ಮೇಲೆ ದಾಖಲಿಸಲಾಗಿದೆ.

- Advertisement -


ಪ್ರಕರಣದ ಸತ್ಯಾಂಶಗಳನ್ನು ಗಮನಿಸುವಾಗ, ಆರೋಪಿತ ವ್ಯಕ್ತಿಗಳನ್ನು ಎಫ್‌ ಐ ಆರ್‌ ನಲ್ಲಿ ನಿರ್ದಿಷ್ಟವಾಗಿ ಹೆಸರಿಸಿಲ್ಲ ಅಥವಾ ಈ ವಿಷಯದಲ್ಲಿ ಅವರಿಗೆ ಯಾವುದೇ ನಿರ್ದಿಷ್ಟ ಪಾತ್ರ ಕಂಡುಬರುತ್ತಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಆರೋಪಿಗಳ ವಿರುದ್ಧ ಯಾವುದೇ ಸ್ವತಂತ್ರ ಪ್ರತ್ಯಕ್ಷ ಸಾಕ್ಷಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ.



Join Whatsapp