ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ ಓಖ್ಲಾ ಶಾಸಕ
ನವದೆಹಲಿ: ತನ್ನ ವಿರುದ್ಧ ಕಪೋಲಕಲ್ಪಿತ ಕಥೆಗಳನ್ನು ಹೆಣೆದ ದೆಹಲಿ ಪೊಲೀಸರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ ಎಎಪಿ ಶಾಸಕ ಅಮಾನತುಲ್ಲಾ ಖಾನ್, ಈ ಸಂಬಂಧ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.
ತನಗೆ ಮತ್ತು ಹೆಂಡತಿ, ಮಕ್ಕಳಿಗೆ ಅನವಶ್ಯಕ ಕಿರುಕುಳ, ಗಂಭೀರ ಕಿರುಕುಳ, ಗಂಭೀರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿದಕ್ಕಾಗಿ ಬೇಷರತ್, ಲಿಖಿತ, ಸಾರ್ವಜನಿಕ ಕ್ಷಮೆಯಾಚನೆ ನಡೆಸುವಂತೆ ದೆಹಲಿ ಪೊಲೀಸರಿಗೆ ನೀಡಿದ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ದೆಹಲಿ ಪೊಲೀಸರು ತನ್ನನು ನಿರಂತರವಾಗಿ ಗುರಿಯಾಗಿಸಿದ್ದರು ಎಂದು ಅಮಾನತುಲ್ಲಾ ಖಾನ್ ಟ್ವೀಟ್ ನಲ್ಲಿ ನಮೂದಿಸಿದ್ದರು.
ತನ್ನ ವಿರುದ್ಧ ಒಟ್ಟು 18 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.