ನ್ಯೂಸ್ ಕ್ಲಿಕ್ ಮಾಜಿ ಉದ್ಯೋಗಿಯ ಮನೆ ಮೇಲೆ ದೆಹಲಿ ಪೊಲೀಸರ ದಾಳಿ

Prasthutha|

ನವದೆಹಲಿ: ಮಲಯಾಳಿ ಪತ್ರಕರ್ತೆ ಮತ್ತು ನ್ಯೂಸ್ ಕ್ಲಿಕ್ ಮಾಜಿ ಉದ್ಯೋಗಿ ಅನುಷಾ ಪೌಲ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್ ಅನ್ನು ದೆಹಲಿ ಪೊಲೀಸರು ಶುಕ್ರವಾರ ಕೇರಳದ ಕೊಡುಮನ್ ಬಳಿಯ ನಿವಾಸದಿಂದ ವಶಪಡಿಸಿಕೊಂಡಿದ್ದಾರೆ.

- Advertisement -


ದೆಹಲಿ ಪೊಲೀಸರ ಮೂವರು ಸದಸ್ಯರ ತಂಡ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ ಎಂದು ಅನುಷಾ ಪೌಲ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಸಿಪಿಐ (ಎಂ) ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಲಾಗಿದೆ ಎಂದು ಪಾಲ್ ಮಾಧ್ಯಮಗಳಿಗೆ ತಿಳಿಸಿದರು. ರೈತರ ಪ್ರತಿಭಟನೆ, ಎನ್ ಆರ್ ಸಿ-ಸಿಎಎ ವಿರೋಧಿ ಪ್ರತಿಭಟನೆಗಳು ಅಥವಾ ಕೇಂದ್ರ ಸರ್ಕಾರದ ಕೋವಿಡ್ -19 ನಿರ್ವಹಣೆಯ ಬಗ್ಗೆ ವರದಿ ಮಾಡಿದ್ದೀರಾ ಎಂಬ ಪ್ರಶ್ನೆಗಳು ಇದ್ದವು ಎಂದು ಅವರು ಹೇಳಿದರು. ”ನರೇಂದ್ರ ಮೋದಿ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತುತ್ತಿದ್ದ ಸಂಸ್ಥೆ ಮತ್ತು ಅದರ ಉದ್ಯೋಗಿಗಳಿಗೆ ಬೆದರಿಕೆ ಹಾಕುವ ಕುತಂತ್ರ” ಎಂದು ಪೌಲ್ ಉಲ್ಲೇಖಿಸಿದ್ದಾರೆ.
ತಮ್ಮ ಮನೆಯ ಸದಸ್ಯರ ಚಿಕಿತ್ಸೆಗಾಗಿ ಪೌಲ್ ಅವರು ಕೇರಳದಲ್ಲಿ ನೆಲೆಸಿದ್ದರು. ಸಿಪಿಐ(ಎಂ)ನ ದೆಹಲಿ ರಾಜ್ಯ ಕಾರ್ಯದರ್ಶಿ ಕೆಎಂ ತಿವಾರಿ ಅವರಿಗೆ ತಿಳಿದಿದೆಯೇ ಎಂದು ದೆಹಲಿ ಪೊಲೀಸರು ತನ್ನನ್ನು ಕೇಳಿದರು ಎಂದು ಅವರು ಹೇಳಿದರು.