ಅಮಾನತುಗೊಂಡ ನೂಪುರ್ ಶರ್ಮಾಗೆ ದಿಲ್ಲಿ ಪೋಲೀಸರ ಭದ್ರತೆ !

Prasthutha|

ನವದೆಹಲಿ: ಪ್ರವಾದಿ ನಿಂದನೆ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಮೇಲೆ ಎಫ್ಐಆರ್ ದಾಖಲಾಗುತ್ತಲೇ ಆಕೆಯು ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪೋಲೀಸರಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ದೆಹಲಿ ಪೋಲೀಸರು ನೂಪುರ್ ಶರ್ಮಾ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆಯನ್ನು ವ್ಯವಸ್ಥೆಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

- Advertisement -

ನನಗೆ ಹೋದಲ್ಲೆಲ್ಲ ಮತ್ತು ಫೋನಿನಲ್ಲಿ ನಿಂದನೆ ಮತ್ತು ಬೆದರಿಕೆಗಳು ಬರುತ್ತಿರುವುದರಿಂದ ಭದ್ರತೆ ಒದಗಿಸಬೇಕು ಎಂದು ನೂಪುರ್ ಶರ್ಮಾ ಅವರು ದೆಹಲಿ ಪೋಲೀಸರಲ್ಲಿ ಮನವಿ ಮಾಡಿದ್ದರು.

“ತನಗೆ ಬೆದರಿಕೆ ಬರುತ್ತಿರುವುದಾಗಿಯೂ, ತೊಂದರೆ ನೀಡುತ್ತಿರುವುದಾಗಿಯೂ ನೂಪುರ್ ಲಿಖಿತವಾಗಿ ನಮಗೆ ಮನವಿ ಸಲ್ಲಿಸಿರುವುದರಿಂದ ನಾವು ಆಕೆಗೆ ಭದ್ರತೆ ಒದಗಿಸಿದ್ದೇವೆ” ಎಂದು ಪೋಲೀಸು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ನಮ್ಮ ಮಹಾದೇವನ ಬಗ್ಗೆ ಕೆಟ್ಟ ಹೇಳಿಕೆಗಳು ಬರುತ್ತಿದ್ದುದರಿಂದ ನಾನು ಹಾಗೆ ಹೇಳಬೇಕಾಯಿತು ಎಂದು ನೂಪುರ್ ಶರ್ಮಾ ಅವರು ತಿಳಿಸಿದ್ದಾರೆ.

ಕೊಲ್ಲಿ ದೇಶಗಳ ಒತ್ತಡಕ್ಕೆ ಮಣಿದು ಶರ್ಮಾ ಅಮಾನತು, ಜಿಂದಾಲ್ ಉಚ್ಚಾಟನೆ ಆಗಿದ್ದರೂ ಮಂಗಳವಾರವೂ ಕೊಲ್ಲಿ ದೇಶಗಳಲ್ಲಿ ಅದರಲ್ಲೂ ಕುವೈತ್, ಕತಾರ್, ಇರಾನ್ ಗಳಲ್ಲಿ ಭಾರತದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಶರ್ಮಾ ಮತ್ತು ಜಿಂದಾಲ ಪ್ರಚೋದಕ ಹೇಳಿಕೆಗಳಿಂದಾಗಿ ಕೆಲವು ಅರಬ್ ದೇಶಗಳಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ಜಿಂದಾಲ್ ರ ವಿವಾದಿತ ಜಾಲ ತಾಣ ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ. ನೂಪುರ್ ಒಂದು ಕಡೆ ಪೋಲೀಸು ಭದ್ರತೆ ಪಡೆಯುತ್ತ ಇನ್ನೊಂದು ಕಡೆ ನಾನು ಹಾಗೆ ಹೇಳಲು ನಮ್ಮ ದೇವರ ನಿಂದನೆ ಕಾರಣ ಎಂದಿದ್ದಾರೆ.

ಕ್ರಿಮಿನಲ್ ಬೆದರಿಸುವಿಕೆ 506, ಭಾರೀ ಸಂಚಲನ ಸಂಪರ್ಕದ ಕ್ರಿಮಿನಲ್ ಬೆದರಿಕೆ ತಂತ್ರ 507, ಮಹಿಳೆಯ ಗೌರವಕ್ಕೆ ಕುಂದುಂಟು ಮಾಡುವ ಪದಗಳ ಬಳಕೆ 509 ಈ ಐಪಿಸಿ ವಿಧಿಗಳಡಿ ಎಫ್ಐಆರ್ ದಾಖಲಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.

ಈ ಮಧ್ಯೆ ನೂಪುರ್ ಗೆ ಕೆಲವು ವ್ಯಕ್ತಿಗಳು ದ್ವೇಷ ಸಾಧಿಸುವುದಾಗಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 153ಎ ಸೆಕ್ಷನ್ ಅಡಿ ಸಹ ದೂರು ದಾಖಲಿಸಿರುವುದಾಗಿ ದಿಲ್ಲಿ ಪೋಲೀಸರು ತಿಳಿಸಿದ್ದಾರೆ.

ಟ್ವಿಟರ್ ಇಂಕ್ ಮೂಲಕ ನೋಟೀಸುಗಳನ್ನು ನೀಡಲಾಗಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೋಲೀಸು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp