ಮೆಕ್ಸಿಕೋದಿಂದ ದೀಪಕ್ ಬಾಕ್ಸರ್’ನನ್ನು ಹಿಡಿದು ತಂದ ದಿಲ್ಲಿ ಪೊಲೀಸರು

Prasthutha|

ವಾಷಿಂಗ್ಟನ್: ಎಫ್ ಬಿಐ- ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಸಹಕಾರದಿಂದ ದಿಲ್ಲಿ ಪೊಲೀಸರ ವಿಶೇಷ ಘಟಕವು ಕುಖ್ಯಾತ ಗ್ಯಾಂಗ್ ಸ್ಟರ್ ದೀಪಕ್ ಬಾಕ್ಸರ್’ನನ್ನು ಮೆಕ್ಸಿಕೋದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

- Advertisement -


“ಇನ್ನೊಂದೆರಡು ದಿನದಲ್ಲಿ ಕುಖ್ಯಾತನನ್ನು ಭಾರತಕ್ಕೆ ತರಲಾಗುತ್ತದೆ. ದಿಲ್ಲಿ ಸುತ್ತ ಕುಖ್ಯಾತ ಗ್ಯಾಂಗ್ ಸ್ಟರ್ ಆಗಿದ್ದ ನಕಲಿ ಪಾಸ್ ಪೋರ್ಟ್ ಮೂಲಕ ದೇಶದಿಂದ ಮೂರು ತಿಂಗಳ ಹಿಂದೆ ಪರಾರಿಯಾಗಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.
ಆತನದೇ ಫೋಟೋ ಬೇರೆ ಹೆಸರಿನಲ್ಲಿ ಪಾಸ್ ಪೋರ್ಟ್ ಆಗಿರುವುದು ಈ ಗ್ಯಾಂಗ್ ಸ್ಟರ್ ನನ್ನು ಹಿಡಿಯಲು ಪೊಲೀಸರಿಗೆ ಸಹಾಯವಾಗಿದೆ. ರವಿ ಅಂಟಿಲ್ ಮೊರಾದಾಬಾದ್ ಹೆಸರಿನಲ್ಲಿ, ದೀಪಕ್ ನಕಲಿ ಪಾಸ್ ಪೋರ್ಟ್ ಮಾಡಿ ಕೊಲ್ಕತ್ತದಿಂದ ವಿದೇಶಕ್ಕೆ ಹಾರಿದ್ದ.


2022ರಲ್ಲಿ ದಿಲ್ಲಿ ಸಿವಿಲ್ ಲೈನ್ಸ್ ಬಿಲ್ಡರ್ ಅಮಿತ್ ಗುಪ್ತ ಕೊಲೆಯಲ್ಲಿ ದೀಪಕ್ ಬೇಕಾಗಿದ್ದ.
ದಿಲ್ಲಿಯ ಬುರಾರಿ ಪ್ರದೇಶದಲ್ಲಿ 2022ರ ಆಗಸ್ಟ್ ನಲ್ಲಿ ಸರಣಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಕುಖ್ಯಾತ ಗೋಗಿ ಗ್ಯಾಂಗಿನಲ್ಲಿ ಈತನೂ ಒಬ್ಬ. ಹಣಕ್ಕಾಗಿ ಗುಪ್ತ ಕೊಲೆ ನಡೆದಿತ್ತು. ಒಬ್ಬ ಸಹ ಆರೋಪಿಯನ್ನು ಬಂಧಿಸಲಾಗಿತ್ತು.

- Advertisement -


ದಿಲ್ಲಿ ಬಿಲ್ಡರ್ ಗುಪ್ತನನ್ನು ಕೊಲೆ ಮಾಡಿದ್ದು ನಾನೆ, ಆದರೆ ಹಣಕ್ಕಾಗಿ ಅಲ್ಲ, ಸೇಡಿಗಾಗಿ ಎಂದು ದೀಪಕ್ ಬಾಕ್ಸರ್ ಫೇಸ್ ಬುಕ್ ನಲ್ಲಿ ಹಾಕಿದ್ದ. ಗೋಗಿ ಗ್ಯಾಂಗ್ ವಿರುದ್ಧದ ತಿಲ್ಲು ತೇಜ್ ಪುರಿಯ ಗ್ಯಾಂಗ್ ಜೊತೆ ಗುಪ್ತ ಗುರುತಿಸಿಕೊಂಡುದೇ ಕೊಲ್ಲಲು ಕಾರಣ ಎಂದು ದೀಪಕ್ ಬರೆದಿದ್ದ.
ಅಲ್ಲದೆ ಗೋಗಿ ಗ್ಯಾಂಗಿನ ಕುಲ್ದೀಪ್ ಅಲಿಯಾಸ್ ಫಜ್ಜಾ ಪೊಲೀಸ್ ವಿಶೇಷ ಪಡೆಯವರೊಡನೆ ನಡೆದ ಗುಂಡಿನ ಕದನದಲ್ಲಿ ಸಾವಿಗೀಡಾಗಿದ್ದ. ಪಜ್ಜಾ ಅಲ್ಲಿರುವ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ನೀಡಿದ್ದ ಎಂಬುದು ದೀಪಕ್ ಆರೋಪ.



Join Whatsapp