ದೆಹಲಿ ಗಲಭೆ: ನಾಲ್ವರು ಮುಸ್ಲಿಮರು ದೋಷಮುಕ್ತ

Prasthutha|

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಂಘಪರಿವಾರ ಮುಸ್ಲಿಮರ ವಿರುದ್ಧ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಭಟ್ ಅವರು ನಾಲ್ವರು ಮುಸ್ಲಿಮರನ್ನು ಪುರಾವೆಯ ಕೊರತೆಯಿಂದ ದೋಷಮುಕ್ತಗೊಳಿಸಿದ್ದಾರೆ.

- Advertisement -

ದೆಹಲಿ ಗಲಭೆಯ ಎರಡು ವಾರಗಳ ನಂತರ ಶೋಯೆಬ್ ಆಲಂ ಅವರನ್ನು ಗಲಭೆಯಲ್ಲಿ ನೇರವಾಗಿ ಭಾಗಿಯಾದ ಆರೋಪದಲ್ಲಿ 2020 ರ ಮಾರ್ಚ್ 7 ರಂದು ಪೊಲೀಸರು ಬಂಧಿಸಿದ್ದರು.

ಮಾತ್ರವಲ್ಲ ಈ ಗಲಭೆಗೆ ಸಂಬಂಧಿಸಿ ಬಂಧಿತ ಇತರ ಆರೋಪಿಗಳಾದ ಅನಸ್, ಜಾವೇದ್, ಗುಲ್ಫಾಮ್ ಎಂಬವರ ಬಿಡುಗಡೆಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

- Advertisement -

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 148, 186/1, 188, 332, 353, 427, 436 ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ತಾರಾ ನರುಲಾ ಮತ್ತು ತಮನ್ನಾ ಪಂಕಜ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.




Join Whatsapp