ದೆಹಲಿ ಪಾಲಿಕೆ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ 

Prasthutha|

ನವದೆಹಲಿ: ಡಿಸೆಂಬರ್ 4ರಂದು ಮತದಾನ ನಡೆಯಲಿರುವ ದೆಹಲಿ ಮನಪಾ ಚುನಾವಣೆಗೆ ಬಹಿರಂಗ ಪ್ರಚಾರ ಮುಗಿದಿದ್ದು, ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಲಗ್ಗೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ.

- Advertisement -

ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಎಎಪಿ, ಕಾಂಗ್ರೆಸ್ ಸವಾಲು ಹಾಕಿವೆ. ಮತದಾರರ ನಿರಾಸಕ್ತಿ ಕಂಡು ಬಂದಿದೆ. ನಿನ್ನೆ ಗುಜರಾತಿನಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಕಡಿಮೆ ಮತದಾನ ಆಗಿದ್ದ, ಅಲ್ಲೂ ಸ್ಪರ್ಧೆಯಲ್ಲಿರುವ ಈ ಮೂರು ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಪ್ರಚಾರದ ಅಂತಿಮ ದಿನವಾಗಿದ್ದು 250 ವಾರ್ಡ್ ಗಳಲ್ಲೂ ಎಲ್ಲ ಪಕ್ಷಗಳ ಕಾರ್ಯಕರ್ತರು ತಮ್ಮ ಭಾರೀ ಪ್ರಯತ್ನದೊಡನೆ ಪ್ರಯಾಸ ಪಡುತ್ತಿದ್ದಾರೆ. ಫಲಿತಾಂಶ ಡಿಸೆಂಬರ್ 7ರಂದು ಬರಲಿದೆ.

- Advertisement -

ಬಿಜೆಪಿ ಅಧ್ಯಕ್ಷ ನಡ್ಡಾ, ಕೇಂದ್ರ ಮಂತ್ರಿಗಳ ಸಹಿತ ಬಿಜೆಪಿ ಪರ ಹಲವು ನಾಯಕರು ಪ್ರಚಾರ ನಡೆಸಿದ್ದಾರೆ. ಎಎಪಿ ಕೆಲಸದ ಬಗ್ಗೆ ಏನೂ ಮಾತನಾಡಲಾಗದೆ ಬಿಜೆಪಿಯು “ಸಾವಿರಾರು ಕೋಟಿ ವೆಚ್ಚವಾದರೂ ಯಮುನಾ ನದಿ ಸ್ವಚ್ಛಗೊಳಿಸಿಲ್ಲ” ಎಂದು ಎಎಪಿ ಸರಕಾರದ ಮೇಲೆ ಆರೋಪ ಮಾಡಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಂ ಠಾಕೂರ್ ಮೊದಲಾದವರೂ ಬಂದು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.

2007ರಿಂದಲೂ ಎಂಸಿಡಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಅವರು ಅರವಿಂದ ಕೇಜ್ರಿವಾಲ್ ರದ್ದು ಮದ್ಯ, ಭ್ರಷ್ಟಾಚಾರ, ವಂಚನೆ ಎಂದು ಟೀಕಿಸಿದ್ದಾರೆ.

ಎಎಪಿ ಪರ ದಿಲ್ಲಿ ಮನಪಾ ಚುನಾವಣೆಯ ಪ್ರಚಾರದ ಮುಂಚೂಣಿಯಲ್ಲಿ ಇರುವವರು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ. ಇಂದು ಪತ್ಪರ್ ಗಂಜ್ ನಲ್ಲಿ ರೋಡ್ ಶೋ ನಡೆಸಿದರು.

ಶುಕ್ರವಾರ ಸಂಜೆಯಿಂದ ಡಿಸೆಂಬರ್ 2, 3, 4 ಮೂರು ದಿನ ದಿಲ್ಲಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಅಬಕಾರಿ ಇಲಾಖೆಯು ಆದೇಶ ಹೊರಡಿಸಿದೆ. ಮತದಾನದ ದಿನ ಸಂಜೆ ಮತದಾನ ಮುಗಿಯುವವರೆಗೆ ಈ ಮದ್ಯ ಮಾರಾಟ ನಿಷೇಧ ಇರುತ್ತದೆ.

Join Whatsapp