ದೆಹಲಿ: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ಅಪ್ರಾಪ್ತರು

Prasthutha|

ದೆಹಲಿ: ಜೈತ್ ಪುರದ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

- Advertisement -


ಹತ್ಯೆಗೊಳಗಾದ ವೈದ್ಯನನ್ನು ಡಾ.ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ.


ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಇಬ್ಬರು 16-17 ವರ್ಷ ವಯಸ್ಸಿನವರು ತಡರಾತ್ರಿ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ಒಬ್ಬ ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಬದಲಾಯಿಸಲು ಕೇಳಿದ. ಆತನಿಗೆ ಚಿಕಿತ್ಸೆ ನೀಡಿ, ಡ್ರೆಸ್ಸಿಂಗ್ ಮಾಡಲಾಯಿತು. ಬಳಿಕ ತನಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ. ಈ ವೇಳೆ ಡಾ.ಜಾವೇದ್ ಅಖ್ತರ್ ಅವರ ಕ್ಯಾಬಿನ್ ಗೆ ಹೋದರು. ಈ ವೇಳೆ ಗುಂಡಿನ ದಾಳಿ ನಡೆದಿದೆ.
ಅವರ ತಲೆಗೆ ಗುಂಡು ತಗುಲಿದ್ದು ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -


ಆರೋಪಿಗಳು 16 ಅಥವಾ 17 ವರ್ಷ ವಯಸ್ಸಿನವರಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಉದ್ದೇಶಿತ ಹತ್ಯೆಯ ಪ್ರಕರಣವೆಂದು ತೋರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.



Join Whatsapp