“ದಿಲ್ಲಿ ಹತ್ಯಾಕಾಂಡ-೨೦೨೦” ಪುಸ್ತಕ ಬಿಡುಗಡೆಗೊಳಿಸಿದ ಪಿಎಫ್ ಐ

Prasthutha|

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಧ್ಯಮ ವರದಿಗಳು ಮತ್ತು ಹಲವಾರು ಸತ್ಯಶೋಧನಾ ತಂಡದ ವರದಿಗಳನ್ನು ಕ್ರೋಡೀಕರಿಸಿ ಪ್ರಕಾಶನಗೈದ “ದಿಲ್ಲಿ ಹತ್ಯಾಕಾಂಡ-೨೦೨೦” ಪುಸ್ತಕದ ಕನ್ನಡ ಆವೃತ್ತಿಯನ್ನು ಮಂಗಳೂರಿನಲ್ಲಿ ಇತ್ತೀಚಿಗೆ ಬಿಡುಗಡೆಗೊಳಿಸಲಾಯಿತು.

- Advertisement -

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ, ದಿಲ್ಲಿ ಹತ್ಯಾಕಾಂಡವು ಒಂದು ಯೋಜಿತ ಘಟನೆಯಾಗಿದ್ದು ಆಡಳಿತ ವ್ಯವಸ್ಥೆಯ ಬೆಂಬಲದೊಂದಿಗೆ ಸಂಘಪರಿವಾರದ ದುಷ್ಕರ್ಮಿಗಳು ನಡೆಸಿದ ಭಯಾನಕ ದುಷ್ಕೃತ್ಯವಾಗಿದೆ ಮತ್ತು ಈ ಘಟನೆಯು ದೇಶದ ಕಾನೂನು ಸುವ್ಯವಸ್ಥೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದರು.

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ನಡೆಸಲಾದ ಈ ಹತ್ಯಾಕಾಂಡದಲ್ಲಿ ಅಪಾರ ಪ್ರಮಾಣದ ನಾಶನಷ್ಟ ಸಂಭವಿಸಿದೆ. ಕೇಂದ್ರದ ಬಿಜೆಪಿ ಸರಕಾರದ ಅಧೀನದಲ್ಲಿರುವ ದಿಲ್ಲಿ ಪೊಲೀಸರು ಹಿಂಸಾಚಾರ ತಡೆಯುವ ಬದಲು ಗಲಭೆಕೋರರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರ ನೀಡಿದರು. ಗಲಭೆಯ ನಂತರವೂ ಎಫ್.ಐ.ಆರ್ ದಾಖಲಿಸಲು ನಿರಾಕರಣೆ ಮತ್ತು ಸಂತ್ರಸ್ತರಲ್ಲಿ ಭೀತಿ ಹುಟ್ಟಿಸಿ ನ್ಯಾಯ ನಿರಾಕರಿಸುವ ಪ್ರಯತ್ನಗಳು ಎಗ್ಗಿಲ್ಲದೇ ನಡೆದಿವೆ. ಇಂತಹ ಹತ್ತು ಹಲವು ವಾಸ್ತವಾಂಶಗಳನ್ನು ಈ ಪುಸ್ತಕವು ಅನಾವರಣಗೊಳಿಸುತ್ತದೆ ಎಂದು ಅಯ್ಯೂಬ್ ಅಗ್ನಾಡಿ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಕೋಶಾಧಿಕಾರಿ ಶಾಹಿದ್ ನಸೀರ್ ಗುಲ್ಬರ್ಗಾ, ಕಾರ್ಯಕಾರಿ ಸಮಿತಿ ಸದಸ್ಯ ಶರೀಫ್ ಕೊಡಾಜೆ, ಬೆಂಗಳೂರು ಝೋನಲ್ ಅಧ್ಯಕ್ಷ ಇಲ್ಯಾಸ್ ಅಹ್ಮದ್ ಉಪಸ್ಥಿತರಿದ್ದರು.

Join Whatsapp