ದೆಹಲಿಯ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ: ಬೆಂಕಿಗಾಹುತಿಯಾದ ನೂರಾರು ಅಂಗಡಿಗಳು

Prasthutha|

ದೆಹಲಿ: ಇಲ್ಲಿನ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ನೂರಾರು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಗುರುವಾರ ನಡೆದಿದೆ.

- Advertisement -

ಗುರುವಾರ ಬೆಳಗ್ಗಿನ ಜಾವ ಚಾಂದಿನಿಚೌಕ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ವಿಷಯ ತಿಳಿದ ತಕ್ಷಣ ಸುಮಾರು 12 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿವೆ.

ಬೆಳಿಗ್ಗೆ 4.45 ಕ್ಕೆ ಕೆಂಪು ಕೋಟೆಯ ಎದುರಿರುವ ಲಜಪತ್ ರಾಯ್ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ. ಸಾಲು ಸಾಲಾಗಿರುವ ಸಣ್ಣ ಸಣ್ಣ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದೃಶ್ಯ ಕಂಡುಬಂತು.

- Advertisement -

“ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ.

Join Whatsapp