‘ದೆಹಲಿಗೆ ಶೀಘ್ರ ಆಮ್ಲಜನಕ ಪೂರೈಕೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು’ : ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ

Prasthutha|

ಹೊಸದಿಲ್ಲಿ : ದೆಹಲಿಯಲ್ಲಿ ಕೊರೋನಾ ಅಟ್ಟಹಾಸದಿಂದಾಗಿ ಆಕ್ಸಿಜನ್ ಕೊರತೆಯುಂಟಾಗಿ ಜನತೆ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ದೆಹಲಿ ಹೈ ಕೋರ್ಟ್ ಎಚ್ಚರಿಕೆ ನೀಡಿದ್ದು, ರಾಷ್ಟ್ರರಾಜಧಾನಿ ದೆಹಲಿಗೆ ಶನಿವಾರವೇ 490 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಬೇಕು ಇಲ್ಲವಾದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾದೀತು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದೆ.

- Advertisement -

ಆಮ್ಲಜನಕ ದೊರಕದೆ ಬಾತ್ರಾ ಆಸ್ಪತ್ರೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ “ಇನ್ನು ಸಾಕು” ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

“ಏನು ಮಾಡಬೇಕೆಂಬ ಅರಿವು ನಮಗೆ ಇದೆ. ಈಗಾಗಲೇ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದೆ. ದೆಹಲಿಯಲ್ಲಿ ಸಾಯುತ್ತಿರುವ ಜನರನ್ನು ನಾವು ಕಣ್ಣುಮುಚ್ಚಿ ನೋಡುತ್ತಿರುತ್ತೇವೆ ಎಂದು ನೀವು ಭಾವಿಸಿದ್ದೀರಾ?” ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರದ ವಿರುದ್ದ ಕಿಡಿಕಾರಿದೆ.

Join Whatsapp