ಉತ್ತರ ಪ್ರದೇಶದಲ್ಲಿ ನಡೆಯಬಹುದು ಇಲ್ಲಲ್ಲ | ಆದಿತ್ಯನಾಥ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹೀಗೊಂದು ‘ಛೀಮಾರಿ’

Prasthutha|

ನವದೆಹಲಿ: ಉತ್ತರ ಪ್ರದೇಶ ಪೊಲೀಸರು ಕುಟುಂಬದ ಇಚ್ಛೆಯಿಲ್ಲದೆ ಯುವತಿಯೊಬ್ಬಳು ಮದುವೆಯಾದ ಕಾರಣಕ್ಕೆ ಹುಡುಗನ ತಂದೆ ಮತ್ತು ಸಹೋದರನ್ನು ಬಂಧಿಸಿದ್ದರು. ಈ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಛೀಮಾರಿ ಹಾಕಿದೆ. ಈ ರೀತಿಯದ್ದೆಲ್ಲಾ ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ, ದೆಹಲಿಯಲ್ಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಮದುವೆಯಾದ ಜೋಡಿಗಳು ವಯಸ್ಕರಾಗಿರಲಿ, ಇಲ್ಲವೇ ಅಪ್ರಾಪ್ತರಾಗಿರಲಿ, ನಿಮ್ಮಲ್ಲಿ ಯಾರಾದರೂ ಬಂದು ದೂರು ನೀಡಿದರೆ ನೀವೇಗೆ ವಯಸ್ಸನ್ನು ದೃಢೀಕರಿಸದೆ ಪ್ರಕರಣವನ್ನು ದಾಖಲಿಸಿ ಬಂಧಿಸುತ್ತೀರಿ ಎಂದು ಉತ್ತರ ಪ್ರದೇಶ ಪೊಲೀಸರನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೇ ದೆಹಲಿ ಪೊಲೀಸರಿಗೆ ಮಾಹಿತಿಯನ್ನು ನೀಡದೆ ಹುಡುಗನ ತಂದೆ ಮತ್ತು ಸಹೋದರನನ್ನು ದೆಹಲಿಯಿಂದ ಬಂಧಿಸಲು ನಿಮಗೆ ಅನುಮತಿ ನೀಡಿದವರ್ಯಾರು ಎಂದೂ ಪ್ರಶ್ನಿಸಿ ಛೀಮಾರಿ ಹಾಕಿದೆ.

ಉತ್ತರ ಪ್ರದೇಶ ಪೊಲೀಸರು ಯುವತಿಯು ಸ್ವ ಇಚ್ಛೆಯಿಂದ ಪೋಷಕರನ್ನು ತೊರೆದು ಹುಡುಗನನ್ನು ಮದುವೆಯಾಗಿದ್ದಾಳೆ ಎಂದು ಅರಿಯಲು ವಿಫಲರಾಗಿದ್ದಾರೆ ಮತ್ತು ಯುವತಿಯು ಪ್ರಾಪ್ತ ವಯಸ್ಸಿನವಳಾಗಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ , ಯೂಪಿ ಪೊಲೀಸರು ಹುಡುಗನ ಕುಟುಂಬಿಕರನ್ನು ಅನುಮತಿಯಿಲ್ಲದೆ ದೆಹಲಿಯಿಂದ ಬಂಧಿಸಿದ್ದಾರೆಯೇ ಎಂದು ವಿಚಾರಣೆ ನಡೆಸಲಿದೆ, ಪೊಲೀಸರು ತಪ್ಪಿತಸ್ಥರಾಗಿದ್ದರೆ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.



Join Whatsapp