ಪಿಎಫ್’ಐ ಮಾಜಿ ಅಧ್ಯಕ್ಷ ಅಬೂಬಕರ್’ರನ್ನು ಗೃಹಬಂಧನಕ್ಕೆ ಕಳುಹಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್

Prasthutha|

ಏಮ್ಸ್’ಗೆ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ

- Advertisement -

ನವದೆಹಲಿ: ವೈದ್ಯಕೀಯ ಕಾರಣಗಳಿಗಾಗಿ ಪಿಎಫ್’ಐನ ಮಾಜಿ ಅಧ್ಯಕ್ಷ ಇ ಅಬೂಬಕರ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಅಬೂಬಕರ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದು, ಚಿಕಿತ್ಸೆಗಾಗಿ ಅವರನ್ನು ಏಮ್ಸ್ ಗೆ ಕರೆದೊಯ್ಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅಬೂಬಕರ್ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿದ್ದರು.

- Advertisement -

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅಬೂಬಕರ್ ಅವರನ್ನು ಗೃಹಬಂಧನಕ್ಕೆ ಕಳುಹಿಸಬೇಕು ಎಂಬ ಬೇಡಿಕೆಯನ್ನು ತಳ್ಳಿ ಹಾಕಿದ್ದು,  ಏಮ್ಸ್’ನ ಗ್ರಂಥಿ ಶಸ್ತ್ರಚಿಕಿತ್ಸಾ ವಿಭಾಗ ಸೂಚಿಸಿದ ಸಲಹೆ ಮತ್ತು ಚಿಕಿತ್ಸೆಯನ್ನು ಮುಂದಿನ ದಿನಾಂಕದಂದು ಸಲ್ಲಿಸುವಂತೆ ವೈದ್ಯಕೀಯ ಅಧೀಕ್ಷಕರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಡಿಸೆಂಬರ್ 22 ರಂದು ಅವರನ್ನು ಏಮ್ಸ್’ಗೆ ಕರೆದೊಯ್ಯುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ನ್ಯಾಯಾಲಯವು ಅವರ ಮಗನಿಗೆ ತಂದೆಯೊಂದಿಗೆ ಹೋಗಲು ಅನುಮತಿ ನೀಡಿದೆ.

ಮುಂದಿನ ವಿಚಾರಣೆಯನ್ನು ಜನವರಿ 6, 2023ರಂದು ಪಟ್ಟಿ ಮಾಡಲಾಗಿದೆ.

ಈ ಹಿಂದೆ ಡಿಸೆಂಬರ್ 14 ರಂದು, ಪಿಎಫ್’ಐನ ಮಾಜಿ ಅಧ್ಯಕ್ಷ ಅಬೂಬಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರು ಆರೋಗ್ಯವಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. ಅಬೂಬಕರ್ ಅವರು ಚಿಕಿತ್ಸೆ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ಎನ್’ಐಎ ತನ್ನ ವರದಿಯನ್ನು ಸಲ್ಲಿಸಿದೆ. ಅವರನ್ನು ಸೆಪ್ಟೆಂಬರ್ ನಲ್ಲಿ ಎನ್’ಐಎ ಬಂಧಿಸಿತ್ತು.

Join Whatsapp