ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ: ಎಂಎಲ್ ಸಿ ಕವಿತಾಳ ಲೆಕ್ಕ ಪರಿಶೋಧಕ ಸಿಬಿಐ ಬಲೆಗೆ

Prasthutha|

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ಬಿಆರ್ ಎಸ್ ನ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರ ಲೆಕ್ಕ ಪರಿಶೋಧಕನನ್ನು ಕೇಂದ್ರ ತನಿಖಾ ದಳ ಬಂಧಿಸಿದೆ.

- Advertisement -


ಬಂಧಿತನನ್ನು ಬುಚ್ಚಿಬಾಬು ಗೊರಂಟ್ಲಾ ಎಂದು ಗುರುತಿಸಲಾಗಿದೆ. ಅಬಕಾರಿ ಹಗರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬುಚ್ಚಿಬಾಬುಗೆ ಸೂಚಿಸಲಾಗಿತ್ತು. ಆದರೆ ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ದೆಹಲಿ ಅಬಕಾರಿ ಗುತ್ತಿಗೆ ಹಗರಣದಲ್ಲಿ ಕವಿತಾ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು.

- Advertisement -


2021-22ರ ದೆಹಲಿ ಅಬಕಾರಿ ಹಗರಣದಲ್ಲಿ ಹೈದರಾಬಾದ್ ಮೂಲದ ಹೋಲ್ ಸೆಲ್ ಹಾಗೂ ರಿಟೇಲ್ ಮತ್ತು ಅದರ ಮಾಲಿಕರಿಗೆ ಬುಚ್ಚಿಬಾಬು ಕಾನೂನುಬಾಹಿರವಾಗಿ ಪರವಾನಗಿ ಒದಗಿಸಿದ್ದ ಎಂದು ಸಿಬಿಐ ಆರೋಪಿಸಿದೆ.

Join Whatsapp