ದೆಹಲಿ: ನಡುರಸ್ತೆಯಲ್ಲಿ ಹೊತ್ತಿ ಉರಿದ DTC ಬಸ್, ಭಯಾನಕ ದೃಶ್ಯ ವೈರಲ್ !

Prasthutha|

ದೆಹಲಿ: ದೆಹಲಿ ಸಾರಿಗೆ ಸಂಸ್ಥೆಯ ಬಸ್‌ ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಹೊತ್ತಿ ಉರಿದ  ಘಟನೆ ಮಹಿಪಾಲ್‌ ಪುರ ಪ್ರದೇಶದಲ್ಲಿ ನೆಡದಿದೆ.

- Advertisement -

ಬಸ್ ಖಾಲಿ ಇದ್ದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಅಧಿಕಾರಿಯ ಪ್ರಕಾರ  ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿದೆ. ಮಧ್ಯಾಹ್ನ ಹೊತ್ತು ಜೋರಾದ ಗಾಳಿಯ ಹೊಡೆತಕ್ಕೆ ಬೆಂಕಿ ಹರಡಿದ್ದು, ಆ ಪ್ರದೇಶದ ಎರಡು ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿಸಿದ್ದಾರೆ. ಇನ್ನೂ ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Join Whatsapp