ಕೇಜ್ರಿವಾಲ್ ಮನೆ ಹೊರಗೆ ದಾಂಧಲೆ: ಎಂಟು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಹೊರಗೆ ಇತ್ತೀಚೆಗೆ ನಡೆದ ವಿಧ್ವಂಸಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಎಂಟು ಜನರಿಗೆ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. 

- Advertisement -

ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದವರಲ್ಲಿ ಆರೋಪಿಗಳು ಸೇರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂಬುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನವೀನ್ ಕುಮಾರ್ ಕಶ್ಯಪ್ ತಿಳಿಸಿದ್ದಾರೆ.

ಬಂಧಿತ ಪ್ರತಿಭಟನಕಾರರು ಶಾಂತಿಯುತವಾಗಿ ಪ್ರತಿಭಟಿಸುವ ತಮ್ಮ ಮೂಲಭೂತ ಹಕ್ಕನ್ನು “ಗೊತ್ತಿದ್ದೂʼ ಇಲ್ಲವೇ ʼಉದ್ದೇಶಪೂರ್ವಕವಾಗಿʼ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

- Advertisement -

ಚಂದರ್ ಕಾಂತ್ ಭಾರದ್ವಾಜ್, ನವೀನ್ ಕುಮಾರ್, ನೀರಜ್ ದೀಕ್ಷಿತ್, ಸನ್ನಿ ಜಿತೇಂದರ್ ಸಿಂಗ್ ಬಿಷ್ಟ್, ಪ್ರದೀಪ್ ಕುಮಾರ್ ತಿವಾರಿ, ರಾಜು ಕುಮಾರ್ ಸಿಂಗ್ ಹಾಗೂ ಬಬ್ಲು ಕುಮಾರ್ ಅವರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

(ಕೃಪೆ: ಬಾರ್ & ಬೆಂಚ್)



Join Whatsapp