DCW ಮುಖ್ಯಸ್ಥೆ ಸ್ವಾತಿ ಮಲಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: ಮಹಿಳಾ ಹಕ್ಕುಗಳ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ನೇಮಿಸಲು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲು ನಗರದ ನ್ಯಾಯಾಲಯವೊಂದು ಆದೇಶಿಸಿದೆ.

- Advertisement -

ಗುರುವಾರ ಹೊರಡಿಸಿದ ಆದೇಶದಲ್ಲಿ, ಮಾಜಿ ಡಿಸಿಡಬ್ಲ್ಯೂ ಸದಸ್ಯರಾದ ಪ್ರಮಿಳಾ ಗುಪ್ತಾ, ಸಾರಿಕಾ ಚೌಧರಿ ಮತ್ತು ಫರ್ಹೀನ್ ಮಲಿಕ್ ಅವರನ್ನು ಮಲಿವಾಲ್ ಅವರೊಂದಿಗೆ ವಿಚಾರಣೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ದಿಗ್ ವಿನಯ್ ಸಿಂಗ್ ಅವರು, “ದಿಲ್ಲಿ ಮಹಿಳಾ ಆಯೋಗದಿಂದ ಹಲವು ದಿನಾಂಕಗಳಂದು ನಡೆದಿರುವ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯಗಳಿಗೆ ಆರೋಪಿಗಳು ಸಹಿ ಮಾಡಿದ್ದಾರೆ. ಹೀಗಾಗಿ ಪ್ರಶ್ನೆಗೊಳಗಾಗಿದ್ದ ನೇಮಕಾತಿಗಳನ್ನು ಎಲ್ಲ ನಾಲ್ವರೂ ಪರಸ್ಪರ ಒಪ್ಪಂದದ ಮೂಲಕ ನಡೆಸಿರುವ ಅನುಮಾನಕ್ಕೆ ಕಾರಣವಾಗಿದ್ದು, ಇದು ಮೇಲ್ನೋಟದ ಅಪರಾಧವಾಗಿದೆ. ಮಲಿವಾಲ್ ಅಲ್ಲದೆ ಇತರ ಮೂವರು ಆರೋಪಿಗಳೂ ಕಾನೂನು ಬಾಹಿರ ನೇಮಕಾತಿ ಪ್ರಕ್ರಿಯೆನ್ನು ಆಕ್ಷೇಪಿಸುವುದಾಗಲಿ ಅಥವಾ ಅದಕ್ಕೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುವುದಾಗಲಿ ಮಾಡಿಲ್ಲ. ಬದಲಿಗೆ ಆ ಸಭೆಗಳಲ್ಲಿ ಈ ನಿರ್ಣಯಕ್ಕೆ ಅವಿರೋಧವಾಗಿ ಬರಲಾಗಿದೆ ಎಂದು ಹೇಳಲಾಗಿದೆ” ಎಂದು ಹೇಳಿದ್ದಾರೆ.

Join Whatsapp