ದೆಹಲಿ: ಕಟ್ಟಡದಿಂದ ಜಿಗಿದು ವಿಜ್ಞಾನಿ ಆತ್ಮಹತ್ಯೆ

Prasthutha|

ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ವಿಜ್ಞಾನಿಯೊಬ್ಬರು ಕೇಂದ್ರ ದೆಹಲಿಯ ಶಾಸ್ತ್ರಿ ಭವನದ ಏಳನೇ ಮಹಡಿಯಿಂದ ಜಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮೃತ ವ್ಯಕ್ತಿಯನ್ನು ಪಶ್ಚಿಮ ದೆಹಲಿಯ ಪೀರಗ್ರಾಹಿಯ ನಿವಾಸಿ ರಾಜೇಶ್ ಮಲ್ಲಿಕ್ ಎಂದು ಗುರುತಿಸಲಾಗಿದ್ದು, ಕೇಂದ್ರ ಸರ್ಕಾರದ ಹಲವಾರು ಸಚಿವಾಲಯಗಳನ್ನು ಹೊಂದಿರುವ ಶಾಸ್ತ್ರಿ ಭವನದ ಗೇಟ್ ನಂಬರ್ ಎರಡರ ಮುಂದೆ ಶವ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

“ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಮತ್ತು  ಅಪರಾಧ ತಂಡವು ಆಂಬ್ಯುಲೆನ್ಸ್ ನೊಂದಿಗೆ ಘಟನಾ ಸ್ಥಳಕ್ಕೆ ತಲುಪಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ” ಎಂದು ದೆಹಲಿ ಡಿಸಿಪಿ ಅಮೃತ್ ಗುರುಲೋಥ್ ಹೇಳಿದ್ದಾರೆ.



Join Whatsapp