ದೆಹಲಿ: ಯಾವುದೇ ನೋಟಿಸ್ ನೀಡದೆ 600 ವರ್ಷ ಹಳೆಯ ಮಸೀದಿ ನೆಲಸಮ

Prasthutha|

ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ 600 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮಂಗಳವಾರ ಮುಂಜಾನೆ ನೆಲಸಮಗೊಳಿಸಿದೆ.

- Advertisement -

ಐತಿಹಾಸಿಕ ಅಖೋಂಜಿ ಮಸೀದಿ ಜತೆ ಮದರಸಾ ಮತ್ತು ದರ್ಗಾವನ್ನು ಯಾವುದೇ ನೋಟಿಸ್ ನೀಡದೆ ನೆಲಸಮಗೊಳಿಸಲಾಗಿದೆ ಎಂದು ಕ್ಲಾರಿಯನ್ ಇಂಡಿಯಾ ವರದಿ ಮಾಡಿದೆ.

ಹೇಟ್ ಡಿಟೆಕ್ಟರ್ ಎಕ್ಸ್ ಖಾತೆಯು ಹಂಚಿಕೊಂಡಿರುವ ವೀಡಿಯೊದಲ್ಲಿ ಮಸೀದಿಯನ್ನು ನೆಲಸಮಗೊಳಿಸುವಾಗ ಸಶಸ್ತ್ರ ಪಡೆಗಳ ಸಿಬ್ಬಂದಿ ನಿಯೋಜಿಸಲ್ಪಟ್ಟಿರುವ ವೀಡಿಯೊವನ್ನು ತೋರಿಸಲಾಗಿದೆ.

- Advertisement -

ಮಸೀದಿಯ ಇಮಾಮ್ ಜಾಕಿರ್ ಹುಸೇನ್ ಮಾತನಾಡಿ, ಈ ಕಾರ್ಯಾಚರಣೆಯನ್ನು ಬುದ್ಧಿವಂತಿಕೆಯಿಂದ ನಡೆಸಲಾಯಿತು, ಅದನ್ನು ಸಾರ್ವಜನಿಕರಿಂದ ಮರೆಮಾಡಲು ಅವಶೇಷಗಳನ್ನು ಆಯಕಟ್ಟಿನ ರೀತಿಯಲ್ಲಿ ತೆಗೆದುಹಾಕಲಾಯಿತು ಎಂದು ಹೇಳಿದ್ದಾರೆ. ಡಿಡಿಎ ಅಧಿಕಾರಿಗಳು ಪೊಲೀಸ್ ಉಪಸ್ಥಿತಿಯೊಂದಿಗೆ ಮಸೀದಿಯನ್ನು ನೆಲಸಮಗೊಳಿಸಿದ್ದಲ್ಲದೆ, ಫೋನ್ ಗಳನ್ನು ವಶಪಡಿಸಿಕೊಂಡರು, ದಾಖಲೆಗಳನ್ನು ತಡೆದರು. ಅಲ್ಲದೆ ಮದರಸಾ ವಿದ್ಯಾರ್ಥಿಗಳ ವಸ್ತುಗಳನ್ನು ವಿಧ್ವಂಸಕಗೊಳಿಸಲಾಗಿದೆ ಎಂದು ಇಮಾಮ್ ಆರೋಪಿಸಿದ್ದಾರೆ.

Join Whatsapp