ದೆಹಲಿ: ಹಾಂಕಾಂಗ್‌ ನಿಂದ ಬಂದ ಮಹಿಳೆಯಿಂದ 26 iPhone 16 ವಶ

Prasthutha|

ನವದೆಹಲಿ: ಹಾಂಕಾಂಗ್ ನಿಂದ ಬಂದ ಮಹಿಳೆಯೊಬ್ಬರಿಂದ 26 ‘ಐಫೋನ್ 16 ಪ್ರೊ ಮ್ಯಾಕ್ಸ್’ ಮೊಬೈಲ್ ಗಳನ್ನುದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -


ಇತ್ತೀಚೆಗಷ್ಟೇ ಆ್ಯಪಲ್ ಸಂಸ್ಥೆಯು ಬಹುನಿರೀಕ್ಷಿತ ಐಫೋನ್ 16 ಪ್ರೊ ಮ್ಯಾಕ್ಸ್ ಮಾದರಿ ಬಿಡುಗಡೆಗೊಳಿಸಿತ್ತು.


ಬೆಲೆ ಬಾಳುವ ಐಫೋನ್ ಗಳನ್ನು ಮಹಿಳೆ ತನ್ನ ವ್ಯಾನಿಟಿ ಬ್ಯಾಗ್ನಲ್ಲಿರಿಸಿ ಅದನ್ನು ಟಿಶ್ಯೂ ಪೇಪರ್ ನಿಂದ ಬಚ್ಚಿಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಗುಪ್ತಚರ ನಿಖರ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.


ದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಐಫೋನ್ಗಳ ಅಂದಾಜು ಬೆಲೆ ₹37 ಲಕ್ಷ ಆಗಿದೆ.



Join Whatsapp