ದೆಹಲಿಯಲ್ಲಿ ಲಾಕ್‌ ಡೌನ್‌ ಸಡಿಲಕ್ಕೆ ಕ್ರಮ : ಸಮ-ಬೆಸ ಆಧಾರದ ಮೇಲೆ ಮಾಲ್‌, ಮಾರ್ಕೆಟ್‌ ತೆರೆಯಲು ಅನುಮತಿ

Prasthutha|

ನವದೆಹಲಿ : ಕೋವಿಡ್‌ ಎರಡನೇ ಅಲೆಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಂತ ಹಂತವಾಗಿ ಅನ್‌ ಲಾಕ್‌ ಪ್ರಕ್ರಿಯೆ ಆರಂಭವಾಗಿದೆ. ಕಳೆದ ವಾರವೇ ಈ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಕಳೆದ ವಾರವೇ ಪ್ರಕಟಿಸಿದ್ದರು. ಇದೀಗ, ಇಂದು ಪತ್ರಿಕಾಗೋಷ್ಠಿ ನಡೆಸಿರುವ ಕೇಜ್ರಿವಾಲ್‌ ಅವರು, ಸಮ-ಬೆಸ ಸಂಖ್ಯೆ ಆಧಾರದ ಮೇಲೆ ಮಾರ್ಕೆಟ್‌ ಮತ್ತು ಮಾಲ್‌ ಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದಿದ್ದಾರೆ.

- Advertisement -

ಶೇ. 50ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಮೆಟ್ರೊ ಚಾಲನೆಗೆ ಸೋಮವಾರದಿಂದಲೇ ಅವಕಾಶ ನೀಡಲಾಗಿದೆ. ಖಾಸಗಿ ಕಚೇರಿಗಳು ಕೂಡ ಶೇ.50ಕ್ಕೆ ಹೆಚ್ಚಿಲ್ಲದಂತೆ, ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಕಾರ್ಯ ನಿರ್ವಹಿಸಬಹುದು.

ಸರಕಾರಿ ಕಚೇರಿಯಲ್ಲೇ ಶೇ.100ರಷ್ಟು ಸಾಮರ್ಥ್ಯದ ಆಧಾರದ ಮೇಲೆ ಕೆಲಸ ನಿರ್ವಹಿಸಬಹುದು. ಆದರೆ, ಗ್ರೂಪ್‌ ಬಿ ವರ್ಗಕ್ಕೆ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ.



Join Whatsapp