ಹಿಬಾ ಶೇಖ್ ವಿರುದ್ಧ RSS ವಿದ್ಯಾರ್ಥಿ ಸಂಘಟನೆ ಎಬಿವಿಪಿ ನೀಡಿದ ನಕಲಿ ದೂರಿನ ಸಮರ್ಥನೆ: ಮಂಗಳೂರು ಕಮಿಷನರ್ ತಿಪ್ಪರಲಾಗ !

Prasthutha|

►ಕಾಲೇಜಿನ ಸೀಲು, ಪ್ರಾಂಶುಪಾಲರ ಸಹಿ ಇರುವ ಅನುಮತಿ ಪತ್ರ ಕೊಟ್ಟವರಾರು?

- Advertisement -

ಮಂಗಳೂರು: ನಗರದ ದಯಾನಂದ ಪೈ ಕಾಲೇಜಿನಲ್ಲಿ ಇತ್ತೀಚೆಗೆ ತನ್ನ ಮೇಲೆ ಹಲ್ಲೆ ನಡೆಸಲು ಬಂದಿದ್ದ ಆರೆಸ್ಸೆಸ್ಸಿನ ವಿದ್ಯಾರ್ಥಿ ಘಟಕವಾಗಿರುವ ಎಬಿವಿಪಿ ಸಂಘಟನೆಯ ಗೂಂಡಾ ಓರ್ವನನ್ನು ಸಮರ್ಥವಾಗಿ ಎದುರಿಸಿದ್ದ ವಿದ್ಯಾರ್ಥಿನಿ ಹಿಬಾ ಶೇಖ್ ವಿರುದ್ಧವೇ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆ ಕುರಿತು ನಿನ್ನೆ ಪತ್ರಿಕಾಗೋಷ್ಠಿ ಕರೆದಿದ್ದ ಹಿಬಾ ಶೇಖ್ ತಾನು ನೀಡಿದ್ದ ದೂರಿನ ಆಧಾರದಲ್ಲಿ ಆ ಗೂಂಡಾ ವಿದ್ಯಾರ್ಥಿಯ ಮೇಲೆ ಸೆಕ್ಷನ್’ಗಳನ್ನು ಹಾಕಿಲ್ಲ ಎಂದು ಆರೋಪಿಸಿದ್ದರು. ಇಂದು ಮತ್ತೆ ಪತ್ರಿಕಾಗೋಷ್ಠಿ ಕರೆದಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಪೊಲೀಸರ ಕ್ರಮವನ್ನು ಸಮರ್ಥಿಸಿದ್ದಾರೆ. ಹಿಬಾ ಶೇಖ್ ಮೇಲೆ ಹಲ್ಲೆ ನಡೆಸಲು ಬಂದಿದ್ದ ವೀಡಿಯೋ ದೃಶ್ಯಾವಳಿಗಳಿದ್ದರೂ ಆ ಬಗ್ಗೆ ಸೂಕ್ತ ಸೆಕ್ಷನ್ ಗಳನ್ನು ದಾಖಲಿಸದೇ, ಘಟನೆ ನಡೆಯುವಾಗ ಸ್ಥಳದಲ್ಲೇ ಇಲ್ಲದ ಕವನಾ ಶೆಟ್ಟಿ ಎನ್ನುವ ಎಬಿವಿಪಿ ಕಾರ್ಯದರ್ಶಿ ನೀಡಿದ್ದ ದೂರಿನ ಆಧಾರದ ಮೇಲೆ ಹಿಬಾ ಶೇಖ್ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

- Advertisement -

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಶಶಿಕುಮಾರ್, ಘಟನೆ ಸಂಬಂಧ ಮೂರು ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ. ಘಟನೆ ಸಂಬಂಧ ಕೆಲವರಿಗೆ ನೋಟೀಸು ನೀಡಲಾಗಿದ್ದು, ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯು ತನ್ನ ತಾರತಮ್ಯ ನೀತಿಗೆ ಕುಖ್ಯಾತಿ ಪಡೆದಿದೆ. ಆದರೆ ಜಿಲ್ಲೆಗೆ ಕಮಿಷನರ್ ಆಗಿ ಬಂದಿದ್ದ ಶಶಿಕುಮಾರ್ ಕೂಡಾ ಆರಂಭದಲ್ಲಿ ಕೆಲ ದಿಟ್ಟ ನಡೆಗಳ ಮೂಲಕ ನಿಷ್ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿದ್ದರು. ಇನ್ನು ಹಿಬಾ ಶೇಖ್ ಸೇರಿದಂತೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಲೈಬ್ರರಿಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವ ಪತ್ರವನ್ನು ನೀಡಿದ್ದರು. ಆದರೆ ಯಾವಾಗ ಎಬಿವಿಪಿ ಗೂಂಡಾಗಳು ಇತರೆ ಕಾಲೇಜಿನಲ್ಲಿ ಮಾಡಿದಂತೆ ಇಲ್ಲೂ ಗಲಾಟೆ ನಡೆಸಿ ಪರೀಕ್ಷೆ ಬರೆಯಲು ಅಡ್ಡಿಪಡಿಸಿದರೋ, ಆ ಬಳಿಕ ಪ್ರಾಂಶುಪಾಲರು ಕೂಡಾ ಉಲ್ಟಾ ಹೊಡೆದಿದ್ದಾರೆ. ತಾನು ಅನುಮತಿ ನೀಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಇನ್ನು ಹಿಬಾ ಶೇಖ್ ಸೇರಿದಂತೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಲೈಬ್ರರಿಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವ ಪತ್ರವನ್ನು ನೀಡಿದ್ದರು. ಆದರೆ ಯಾವಾಗ ಎಬಿವಿಪಿ ಗೂಂಡಾಗಳು ಇತರೆ ಕಾಲೇಜಿನಲ್ಲಿ ಮಾಡಿದಂತೆ ಇಲ್ಲೂ ಗಲಾಟೆ ನಡೆಸಿ ಪರೀಕ್ಷೆ ಬರೆಯಲು ಅಡ್ಡಿಪಡಿಸಿದರೋ, ಆ ಬಳಿಕ ಪ್ರಾಂಶುಪಾಲರು ಕೂಡಾ ಉಲ್ಟಾ ಹೊಡೆದಿದ್ದಾರೆ. ತಾನು ಅನುಮತಿ ನೀಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಅದನ್ನೇ ಇಂದು ಉಲ್ಲೇಖಿಸಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, “ಪರೀಕ್ಷೆ ಬರೆಯಲು ಪ್ರಾಂಶುಪಾಲರು ಅನುಮತಿ ನೀಡಿದ್ದಾರೆಂದು ವಿದ್ಯಾರ್ಥಿಗಳು ಸುಳ್ಳು ಹೇಳಿದ್ದಾರೆ”ಎಂದಿದ್ದಾರೆ. ಹಾಗಿದ್ದರೆ ಕಾಲೇಜಿನ ಸೀಲು ಹಾಕಿ, ಎರಡು ಪ್ರಾಧ್ಯಾಪಕರನ್ನು ಉಲ್ಲೇಖಿಸಿ ಇವರಿಗೆ ಲೈಬ್ರರಿಯಲ್ಲಿ ಪರೀಕ್ಷೆಗೆ ನಡೆಸಿ ಎಂದು ಪ್ರಾಂಶುಪಾಲರು ಸಹಿ ಹಾಕಿರುವ ಪತ್ರ ನೀಡಿದ್ದು ಯಾರು? ಎನ್ನುವ ಪ್ರಶ್ನೆಗೆ ಕಮಿಷನರ್ ಮತ್ತು ಪ್ರಾಂಶುಪಾಲರೇ ಉತ್ತರಿಸಬೇಕಾಗಿದೆ.



Join Whatsapp