ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ದೇಶಭಕ್ತಿಯ ಮಹಾನ್ ಕಾರ್ಯ: ಕೇಜ್ರಿವಾಲ್

Prasthutha|

ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ತೆಗೆದುಹಾಕುವುದು “ದೇಶಭಕ್ತಿಯ ಅತಿದೊಡ್ಡ ಕಾರ್ಯ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

- Advertisement -


ನವದೆಹಲಿಯಲ್ಲಿ ಪಕ್ಷದ ಸ್ವಯಂಸೇವಕರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ.


“ನಮ್ಮ ಪಕ್ಷದ ಸ್ವಯಂಸೇವಕರು ಯಾರೂ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಆದರೂ ನನ್ನ ಕ್ಷೇತ್ರದ ಜನರು ಸ್ವಯಂಸೇವಕರ ಕಾರ್ಯಕ್ಕೆ ಅವರನ್ನು ಶ್ಲಾಘಿಸುತ್ತಾರೆ. ನಮ್ಮ ಪಕ್ಷ ಕೂಡ ರಾಜಕೀಯ ಹಿನ್ನೆಲೆ ಹೊಂದಿರುವ ಪಕ್ಷ ಅಲ್ಲ. ನಾನೂ, ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಹಿರಿಯ ನಾಯಕರು ಕೂಡ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ನಾವೆಲ್ಲರೂ ಆಮ್ ಆದ್ಮಿ. ಇತರ ಪಕ್ಷಗಳ ರಾಜಕಾರಣಿಗಳು ಸಾಮಾನ್ಯವಾಗಿ ಗೂಂಡಾಗಿರಿ ಮಾಡುವುದನ್ನು ನೋಡುತ್ತಿದ್ದರೆ, ಆಪ್ನವರು ಸಭ್ಯರಾಗಿರುವುದರಿಂದ ಜನರು ಇಷ್ಟಪಡುತ್ತಿದ್ದಾರೆ. ಇದು ಆಪ್ನ ಟ್ರೇಡ್ಮಾರ್ಕ್.” ಎಂದು ಹೇಳಿದರು.

Join Whatsapp