ಆರ್ಚರಿ ಸ್ಪರ್ಧೆಯಲ್ಲಿ ಅಭಿಯಾನ ಮುಗಿಸಿದ ದೀಪಿಕಾ ಕುಮಾರಿ

Prasthutha|

ಟೋಕಿಯೋ, ಜು.30: ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ ಸೋತು ಕೂಟದಿಂದ ಹೊರನಡೆದಿದ್ದಾರೆ. ಕ್ವಾರ್ಟರ್ ಫೈನಲ್ ಹಂತದಲ್ಲಿ ಕೊರಿಯಾದ ಸಾನ್ ಆನ್ ವಿರುದ್ಧ 0-6 ಅಂತರದಲ್ಲಿ ಹೀನಾಯವಾಗಿ ಸೋಲುವ ಮೂಲಕ ದೀಪಿಕಾ ಟೋಕಿಯೋ ಒಲಿಂಪಿಕ್ಸ್ ಅಭಿಯಾನ ಕೊನೆಗೊಂಡಿದೆ.

- Advertisement -


ಇದಕ್ಕೊ ಮೊದಲು ನಡೆದ ಪ್ರೀ ಕ್ವಾರ್ಟರ್ ಫೈನಲ್ಸ್ ನಲ್ಲಿ 2016ರ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ರಷ್ಯಾದ ಕ್ಸೆನಿಯಾ ಪೆರೋವಾ ಅವರನ್ನು ದೀಪಿಕಾ 6-5 ಅಂತರದಿಂದ ಪರಾಭವ ಗೊಳಿಸಿದ್ದರು.

ಶೂಟಿಂಗ್; ಫೈನಲ್ ತಲುಪಲು ವಿಫಲವಾದ ಮನು, ರಾಹಿ

- Advertisement -

ಭಾರತದ ಶೂಟರ್ಗಳಾದ ಮನು ಭಾಕರ್ ಮತ್ತು ರಾಹಿ ಸರನೊಬತ್ ಅವರು ಮಹಿಳೆಯರ 25 ಮೀ ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ ತಲುಪಲು ವಿಫಲರಾದರು.


ಮನು 582 ಪಾಯಿಂಟ್ಸ್ ಮತ್ತು ರಾಹಿ 573 ಪಾಯಿಂಟ್ಸ್ ಗಳಿಸಿದರಾದರೂ, ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.



Join Whatsapp