ಪುಣೆ: ಹಸುವಿನ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯ ಲೋನಾವಾಲಾದಲ್ಲಿ ಈ ಘಟನೆ ನಡೆದಿದ್ದು, ಬಂಧಿತನನ್ನು ದೀಪಕ್ ಶಿವಾಜಿ ರಾಜವಾಡೆ ಎಂದು ಗುರುತಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿ (ಅಸಹಜ ಲೈಂಗಿಕ ಕ್ರಿಯೆ) ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೀಪಕ್ ಶಿವಾಜಿ ಹಸುವಿನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದುದ್ದನ್ನು ಗಮನಿಸಿದ ನೆರೆಹೊರೆಯ ಜನ ಮಾಲೀಕರಿಗೆ ವಿಷಯ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಬಳಿಕ ಹಸುವಿನ ಮಾಲೀಕರು ದೂರು ದಾಖಲಿಸಿದ್ದರು.