ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ: ಕುಮಾರಸ್ವಾಮಿಗೆ ಜಮೀರ್ ಸವಾಲು

Prasthutha|

ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ಕುಮಾರಸ್ವಾಮಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ನೀವು ದೆಹಲಿಗೆ ಹೋಗಬೇಕಿಲ್ಲ, ನಮ್ಮಲ್ಲಾದರೆ ಹೈಕಮಾಂಡ್ ಕೇಳಬೇಕು, ನೀವು ಪದ್ಮನಾಭ ನಗರದಲ್ಲಿ ಅನೌನ್ಸ್ ಮಾಡಬಹುದು ಎಂದು ಜಮೀರ್ ತಿರುಗೇಟು ನೀಡಿದ್ದಾರೆ.

- Advertisement -


ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ನೀಡಿದ್ದರು. ಕುಮಾರಸ್ವಾಮಿ ನನ್ನ ಯೋಗ್ಯತೆ ಅದೇನಾ? ನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ಟರು ಎಂದು ಗುಡುಗಿದ್ದಾರೆ.

ಜಾಫರ್ ಷರಿಫ್ ಮೊಮ್ಮಗನನ್ನು ಮುಗಿಸಿದ್ದು ಕುಮಾರಸ್ವಾಮಿ. ನಾನು ಅಭ್ಯರ್ಥಿ ಹಾಕಬೇಡಿ ಎಂದು ಹೇಳಿದರೂ ಹಾಕಿದ್ದಾರೆ. ಇದು ನಿಮ್ಮ ಮುಸ್ಲಿಂ ಮೇಲಿನ ಕಾಳಜಿಯೇ ಕುಮಾರಸ್ವಾಮಿ ಎಂದು ಜಮೀರ್ ಪ್ರಶ್ನೆ ಮಾಡಿದ್ದಾರೆ.



Join Whatsapp