ಸಾಲದ ಹೊರೆ: ದಂಪತಿ ಆತ್ಮಹತ್ಯೆ

Prasthutha|

ಪಾವಗಡ: ಸಾಲದ ಹೊರೆ ಹೆಚ್ಚಾಗಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಪಿ.ರೊಪ್ಪ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ನಡೆದಿದೆ.

- Advertisement -


ಗ್ರಾಮದ ಮನು(27), ಪವಿತ್ರ(24) ಮೃತರು.


ತಾಲ್ಲೂಕಿನ ಪಾಲಕುಂಟೆಯ ಪವಿತ್ರ, ಮನು ಅವರ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. ಮೃತರಿಗೆ ಸುಮಾರು ಎರಡು ವರ್ಷದ ಹೆಣ್ಣು ಮಗು ಇದೆ. ಮಗುವನ್ನು ಪವಿತ್ರ ಅವರ ತವರು ಮನೆಯಲ್ಲಿ ಬಿಡಲಾಗಿತ್ತು. ಪವಿತ್ರಾ ವೇಲಿನಲ್ಲಿ ಇಬ್ಬರೂ ನೇಣು ಹಾಕಿಕೊಂಡ ರೀತಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.