ಉಜ್ಬೆಕಿಸ್ತಾನದಲ್ಲಿ ಕಫ್ ಸಿರಪ್ ನಿಂದ ಮಕ್ಕಳ ಸಾವು; ಮ್ಯಾರಿಯೊನ್ ಬಯೋಟೆಕ್ ಸದಸ್ಯತ್ವ ಅಮಾನತು

Prasthutha|

ನವದೆಹಲಿ: ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್ ಎಕ್ಸಿಲ್) ಮ್ಯಾರಿಯೊನ್ ಬಯೊಟೆಕ್ ನ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ.

- Advertisement -

ಮ್ಯಾರಿಯೊನ್ ಬಯೊಟೆಕ್ ನಿಂದ ತಯಾರಿಸಲಾದ ಕೆಮ್ಮಿನ ಸಿರಪ್ ಸೇವಿಸಿ  ಉಜ್ಬೇಕಿಸ್ತಾನದ 18 ಮಕ್ಕಳು ಮೃತಪಟ್ಟಿರುವ ಪ್ರಕರಣದ  ಬಗ್ಗೆ ವಿವರಣೆ ನೀಡದೇ ಇದ್ದುದಕ್ಕೆ ಮಂಡಳಿಯು ಈ ಕ್ರಮ ತೆಗೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೋರಿ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ಗೆ ಉತ್ತರಿಸದ ಕಾರಣ ಕಂಪನಿಯ ಸದಸ್ಯತ್ವ ವನ್ನು ಅಮಾನತು ಮಾಡಲಾಗಿದೆ.



Join Whatsapp