ಮಗು ಕೊಂದು ತಾಯಿ ಆತ್ಮಹತ್ಯೆ: ಸಾವಿಗೂ ಮುನ್ನ ಬರೆದ ಡೆತ್ ನೋಟ್ ಪತ್ತೆ

Prasthutha|

ಬೆಂಗಳೂರು: ಮಗಳನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.

- Advertisement -


ರಾಜರಾಜೇಶ್ವರಿನಗರದ ಚೆನ್ನಸಂದ್ರದ ಮಂತ್ರಿ ಅಲ್ಫಿಯನ್ ಅಪಾರ್ಟ್ಮೆಂಟ್ ವಾಸಿ ದೀಪಾ (31) ಅವರು ಮೂರುವರೆ ವರ್ಷದ ರಿಯಾಳನ್ನು ವೇಲಿನಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿ ಕೊಲೆ ಮಾಡಿ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೀಪಾ ಅವರು ಕಳೆದ ಒಂದು ವಾರದಿಂದ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ನೋವನ್ನು ಅನುಭವಿಸಲಾಗದೇ ಅವರು ಈ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.


ದೀಪಾ ಅವರು ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ. ಜೀವನವು ಕೊಳಕುಗಳಿಂದ ತುಂಬಿದೆ ಎಂದು ನಾನು ಭಾವಿಸಸುತ್ತೇನೆ. ಕ್ಷಮಿಸಿ ಅಮ್ಮಾಮತ್ತು ದಿವ್ಯಾ.. ಲವ್ ಯು ಸೋನಾ ಎಂದು ಬರೆದಿದ್ದಾರೆ.
ದೀಪಾ ಅವರ ಪತಿ ಆದರ್ಶ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp