ವಿಎಚ್’ಪಿಯ ಶ್ರೀರಂಗಪಟ್ಟಣ ಚಲೋ’ಗೆ ಬಂದವರಲ್ಲಿ “ಮಾರಕ ಆಯುಧಗಳು” !

Prasthutha|

►► ಗಲಭೆಗೆ ಪ್ಲಾನ್ ನಡೆಸಿತ್ತೇ ವಿಎಚ್’ಪಿ ?

- Advertisement -

ಶ್ರೀರಂಗಪಟ್ಟಣ: ಜಾಮಿಯಾ ಮಸೀದಿಯಲ್ಲಿ ಪೂಜೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಶನಿವಾರ ವಿಎಚ್’ಪಿ ಕರೆಕೊಟ್ಟಿದ್ದ ಶ್ರೀರಂಗಪಟ್ಟಣ ಚಲೋ’ದಲ್ಲಿ ಮಾರಕ ಆಯುಧಗಳು ಪತ್ತೆಯಾಗಿವೆ. ಪ್ರತಿಭಟನೆಗೆ ಬಂದಿದ್ದ ಕಾರ್ಯಕರ್ತರು ಬಂದಿದ್ದ ವಾಹನಗಳಲ್ಲಿ ಲಾಂಗ್, ಮಚ್ಚುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಪ್ರತಿಭಟನೆಗೆ ಬಂದಿದ್ದ ಕಾರ್ಯಕರ್ತರ ವಾಹನದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿರುವುದು, ಗಲಭೆಗೆ ಕುಮ್ಮಕ್ಕು ನೀಡಲು ವಿಎಚ್’ಪಿ ತಯಾರಿ ನಡೆಸಿತ್ತೇ ಎನ್ನುವ ಅನುಮಾನವೂ ಮೂಡಿದೆ. ಬೂದಿ ಬಣ್ಣದ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಮಾರಕ ಆಯುಧಗಳನ್ನು ಶೇಖರಿಸಿ ಇಟ್ಟಿರುವ ಪೋಟೋಗಳು ವೈರಲ್ ಆಗಿದ್ದು, ಪ್ರತಿಭಟನೆ ಆಯೋಜಿಸಿದ್ದ ವಿಎಚ್’ಪಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ.

- Advertisement -

ವಿಎಚ್’ಪಿ ಆಯೋಜಿಸಿದ್ದ ಶ್ರೀರಂಗಪಟ್ಟಣ ಚಲೋದಲ್ಲಿ ಪ್ರಚೋದನಕಾರಿ ಘೋಷಣೆಗಳನ್ನೂ ಕಾರ್ಯಕರ್ತರು ಕೂಗಿದ್ದರು. ಮದರಸ ಶಿಕ್ಷಣವನ್ನು ನಿಲ್ಲಿಸದಿದ್ದರೆ ಮಕ್ಕಳನ್ನು ಎಳೆದು ಹೊರ ಹಾಕುವುತ್ತೇವೆಂದು ಬೆದರಿಕೆಯನ್ನೂ ಒಡ್ಡಿದ್ದರು. ಆದಾಗ್ಯೂ ಪೊಲೀಸರು ವಿಎಚ್’ಪಿಯ ಮೆರವಣಿಗೆಗೆ ಅವಕಾಶವನ್ನು ನೀಡದೇ ಮಾರ್ಗ ಮಧ್ಯೆ ತಡೆದಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Join Whatsapp