ಕಸ ಸಾಗಣೆ ವಾಹನದಲ್ಲಿ ಮೃತದೇಹ ಸ್ಮಶಾನಕ್ಕೆ ರವಾನೆ : ಆಕ್ರೋಶ

Prasthutha|

ದೇವಸ್‌ : ಆತ್ಮಹತ್ಯೆಗೈದು ಮೃತನಾದ ವ್ಯಕ್ತಿಯೊಬ್ಬನ ಮೃತದೇಹವನ್ನುಅಂತ್ಯಸಂಸ್ಕಾರಕ್ಕಾಗಿ ಕಸ ಸಾಗಣೆಯ ವಾಹನದಲ್ಲಿ ಕೊಂಡೊಯ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ದೇವಸ್‌ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದೇವಸ್‌ ಜಿಲ್ಲೆಯ ಸೋನಾಕಚಿ ನಗರದಲ್ಲಿ ನಡೆದ ಈ ಘಟನೆಯ ವೀಡಿಯೊ ವೈರಲ್‌ ಆಗಿದೆ. ಈ ಸಂಬಂಧ ಸ್ಥಳೀಯಾಡಳಿತ ಆರೋಗ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮೂವರು ನೌಕರರನ್ನು ವಜಾಗೊಳಿಸಲಾಗಿದೆ.

- Advertisement -

ಖಾಲಿಯಿಯಿದ್ದ ಕಸ ಸಾಗಿಸುವ ವಾಹನದಲ್ಲಿ ಕೆಲವು ಪೌರ ಕಾರ್ಮಿಕರು ಮೃತದೇಹವನ್ನು ಹೇರಿಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿತ್ತು. ರೊಲುಪಿಪಾಲಿಯಾ ಗ್ರಾಮದ ನಿವಾಸಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಮರಣೋತ್ತರ ಪರೀಕ್ಷೆಯ ಬಳಿಕ ಆತನ ಮೃತದೇಹವನ್ನು ಸ್ಥಳೀಯ ಆರೋಗ್ಯ ಕೇಂದ್ರದ ಶವಾಗಾರದಿಂದ ಅಂತ್ಯಸಂಸ್ಕಾರಕ್ಕಾಗಿ ಕಸದ ಸಾಗಣೆಯ ವಾಹನದಲ್ಲಿ ಕೊಂಡೊಯ್ಯಲಾಗಿತ್ತು. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

- Advertisement -