ಪೊಲೀಸ್ ಠಾಣೆ ಆವರಣದಲ್ಲೇ ಡಿಸಿಪಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ : ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಎಫ್ಐಆರ್

Prasthutha|

ಹುಬ್ಬಳ್ಳಿ : ಪೊಲೀಸ್ ಠಾಣೆ ಆವರಣದಲ್ಲೇ ಡಿಸಿಪಿಗೆ ಅವಮಾನಕರ ರೀತಿಯಲ್ಲಿ ನಿಂದಿಸಿ ಬೆದರಿಕೆವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಘಪರಿವಾರದ ಮುಖಂಡ ಅಶೋಕ ಅಣ್ವೇಕರ್ ವಿರುದ್ಧ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಸ್ವತಃ ಡಿಸಿಪಿ ನೀಡಿದ ದೂರಿನಾಧರದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಧರ್ಮ ನಿಂದನೆ ಹಾಗೂ ಶಾಂತಿ ಭಂಗದಂತಹ ಸೆಕ್ಷನ್ ಗಳಡಿ ಕೇಸ್ ದಾಖಲಾಗಿದೆ.


ಇತ್ತೀಚೆಗೆ ಮತಾಂತರ ವಿರೋಧಿಸಿ ಇಲ್ಲಿನ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ವಕೀಲ ಹಾಗೂ ಹಿಂದೂಪರ ಸಂಘಟನೆಯ ಮುಖಂಡ ಅಶೋಕ ಅಣ್ವೇಕರ ಭಾಷಣ ಮಾಡುತ್ತಿದ್ದಾಗ ಡಿಸಿಪಿಯನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ದರು. ಅಶೋಕ ಅಣ್ವೇಕರ್ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಜರಂಗದಳ ಮತ್ತು ಸಂಘಪರಿವಾರದ 100 ಮಂದಿ ಕಾರ್ಯಕರ್ತರ ವಿರುದ್ಧ IPS ಸೆಕ್ಷನ್ 504, 143, 147, 153, 295A, 298, 353 ಅಡಿ ದೂರು ದಾಖಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ. ರಾಮರಾಜನ್ ಅವರಿಂದ ದೂರು ದಾಖಲಾಗಿದೆ.

Join Whatsapp