ಟ್ರಕ್ ನಲ್ಲಿದ್ದದ್ದು ಗೋಮಾಂಸದ ತ್ಯಾಜ್ಯವಲ್ಲ: ನಟಿ ಐಂದ್ರಿತಾ ರೇ ಪೋಸ್ಟ್ ಗೆ ಡಿಸಿಪಿ ಸ್ಪಷ್ಟನೆ

Prasthutha|

ಬೆಂಗಳೂರು: ಟ್ರಕ್ ನಲ್ಲಿ ಗೋಮಾಂಸ ತ್ಯಾಜ್ಯ ಸಾಗಣೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ನೀಡಿದ್ದು, ಅದು ಹಸು ಮಾಂಸ ತ್ಯಾಜ್ಯ ಅಲ್ಲ ಎಂದು ತಿಳಿಸಿದ್ದಾರೆ.

- Advertisement -


ಟ್ರಕ್ ನಲ್ಲಿ ಹಸು ಮಾಂಸದ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು. ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಟಿ ಐಂದ್ರಿತಾ ರೇ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದರು.


ನಟಿ ಆರೋಪಕ್ಕೆ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ನೀಡಿರುವ ಡಿಸಿಪಿ, ಟ್ರಕ್ ನಲ್ಲಿದ್ದ ಮಾಂಸದ ತ್ಯಾಜ್ಯ ಪರಿಶೀಲನೆ ನಡೆಸಲಾಗಿದೆ. ಟ್ರಕ್ ನಲ್ಲಿದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಟ್ರಕ್ ನಲ್ಲಿದ್ದ ಮೂಳೆಗಳು, ಕೊಂಬು, ಚರ್ಮ ಹಸುವಿನದ್ದಲ್ಲ. ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -



Join Whatsapp