ಕೋರ್ಟ್ ತೀರ್ಪು ಫೋರ್ಜರಿ: ಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಡಿಸಿ ಆದೇಶ

Prasthutha|

ಬೀದರ್: ಕೋರ್ಟ್ ತೀರ್ಪು ಫೋರ್ಜರಿ ಮಾಡಿದ್ದ ಹುಮ್ನಾಬಾದ್ ತಾಲೂಕಿನ ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೀದರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

- Advertisement -

ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ (ಕೆಎಟಿ ) ತೀರ್ಪನ್ನು ತಿದ್ದಿದ್ದ ಪ್ರಕರಣಕ್ಕೆ ಬಸವತೀರ್ಥ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿ ಗೋಂವಿದರೆಡ್ಡಿ ಸೂಚನೆ ನೀಡಿದ್ದಾರೆ.


ದೂರುದಾರ ಚಂದ್ರಕಾಂತ ಜಲಾದಾರ, ಸ್ವಾಮೀಜಿ ನಡುವೆ ಭೂವಿವಾದಕ್ಕೆ ಸಂಬಂಧಿಸಿದಂತೆ 2017ರ ನವೆಂಬರ್ 17ರಂದು ಕೆಎಟಿಯ ಅಧಿಕೃತ ತೀರ್ಪನ್ನು ಬಸವತೀರ್ಥ ಮಠದ ಸ್ವಾಮೀಜಿ ಫೋರ್ಜರಿ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಕೋರ್ಟ್ ಆದೇಶದಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹುಮ್ನಾಬಾದ್ ತಹಶೀಲ್ದಾರ್ಗೆ ಬೀದರ್ ಡಿಸಿ ಗೋಂವಿದರೆಡ್ಡಿ ಆದೇಶಿಸಿದ್ದಾರೆ.

Join Whatsapp