►ಕೂಲಿ ಕಾರ್ಮಿಕ ಗ್ರಾಹಕನಿಗೆ ಒಲಿದ ರೆನೋಕ್ವಿಡ್ ಕಾರು
ಬೆಂಗಳೂರು: ಭಾರತ್ ಗ್ಯಾಸ್ ಬೆಂಗಳೂರು ವಿಭಾಗದಿಂದ ಮೊದಲ ಸಿಲೆಂಡರ್ ಪಡೆದವರಿಗೆ ಎರಡನೇ ಸಿಲೆಂಡರ್ ಪಡೆದುಕೊಳ್ಳುವ ಕುರಿತು ಮೂರು ತಿಂಗಳ ಕಾಲ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ 30ಸಾವಿರ ಗ್ರಾಹಕರು ಯೋಜನೆಯಲ್ಲಿ ಪಾಲ್ಗೊಂಡಿದ್ದರು.
ವಿಜೇತರಾದ 75 ಬಡ ಕುಟುಂಬಗಳಿಗೆ ಕಾರು, ಸ್ಕೂಟರ್ ಸೇರಿ 10 ಲಕ್ಷ ರೂಪಾಯಿ ಬಹುಮಾನ ವಿತರಿಸಲಾಯಿತು.
2021 ರ ಜನವರಿಯಿಂದ ಏಪ್ರಿಲ್ 20 ರ ವರೆಗೆ ಬೆಂಗಳೂರು ವಿಭಾಗದ ಅಡುಗೆ ಅನಿಲ ಪೂರೈಕೆದಾರರಿಂದ ಜನ ಜಾಗೃತಿ ಮೂಡಿಸಲಾಯಿತು. ಮೊದಲ ಸಿಲೆಂಡರ್ ಪಡೆದು ಎರಡನೇ ಸಿಲೆಂಡರ್ ಅನ್ನು ದೊರಕಿಸಿಕೊಡುವುದು ಈ ಅಭಿಯಾನದ ಉದ್ದೇಶವಾಗಿತ್ತು. ಇದನ್ನು ಪ್ರೋತ್ಸಾಹಿಸಲು ಹತ್ತು ಲಕ್ಷ ರೂಪಾಯಿ ಮೊತ್ತದ ವಿವಿಧ ಬಹುಮಾನಗಳನ್ನು ಪ್ರಕಟಿಸಲಾಗಿತ್ತು.
ಅಭಿಯಾನದ ಸಂದರ್ಭದಲ್ಲಿ ಬಡ ಅಡುಗೆ ಅನಿಲ ಸಿಲೆಂಡರ್ ಬಳಕೆದಾರರಿಗೆ ಕೂಪನ್ ವಿತರಿಸಲಾಗಿದ್ದು, ಲಕ್ಕಿ ಡ್ರಾನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಹೊಸಕೋಟೆಯ ಬಡ ಕುಟುಂಬದ ಗ್ರಾಹಕನಿಗೆ ರೆನೋಕಿಡ್ ಕಾರಿನ ಕೀ ವಿತರಿಸಲಾಯಿತು. ಇದೇ ರೀತಿ 75 ಬಡ ಕುಟುಂಬಗಳಿಗೆ ಸ್ಕೂಟರ್, ಎಲ್.ಇ.ಡಿ. ಟಿವಿ, ಮೈಕ್ರೋ ಅವನ್ ಮತ್ತಿತರ ಉಪಕರಣಗಳನ್ನು ಭಾರತ್ ಗ್ಯಾಸ್ ನ ದಕ್ಷಿಣ ಭಾರತದ ಪ್ರಾದೇಶಿಕ ವಿಭಾಗದ ಎಲ್.ಪಿ.ಜಿ ವ್ಯವಸ್ಥಾಪಕ ಎಸ್. ಧನಪಾಲ್, ಕರ್ನಾಟಕ ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್ ಗುಪ್ತಾ, ಪ್ರಾದೇಶಿಕ ವ್ಯವಸ್ಥಾಪಕ ಭರತ್ ಕುಮಾರ್ ರಾಯಗರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.