ರಾಜ್ಯದಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣ!

Prasthutha|

ದಾವಣಗೆರೆ: ಬೆಂಗಳೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಿಗೇ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ದುರಂತ ದಾವಣಗೆರೆಯಲ್ಲಿ ಸಂಭವಿಸಿದೆ. ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದು ಈ ದುರ್ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

ದಾವಣಗೆರೆಯ ಭಾರತ್ ಕಾಲನಿಯಲ್ಲಿ‌ ಒಂದು ಕುಟುಂಬ ಸಾವಿಗೆ ಶರಣಾಗಿದೆ. ನ ಕೃಷ್ಣ ನಾಯಕ(35), ಇವರ ಪತ್ನಿ ಸುಮಾ(30), ಮಗು ಧ್ರುವ(6) ಮೃತ ದುರ್ದೈವಿಗಳು.

- Advertisement -

ಕೃಷ್ಣ ನಾಯಕ ಲಾರಿ ಚಾಲಕ. ಪತ್ನಿ ಸುಮಾಗೆ ಹಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ನಿರಂತರ ಅಲೆದಾಡುತ್ತಿದ್ದರು. ಕುಟುಂಬಕ್ಕೆ ಆರ್ಥಿಕ ಸಂಕಷ್ಟ ತೀವ್ರವಾಗತೊಡಗಿದೆ. ಇದೇ ಕಾರಣಕ್ಕೆ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮೇಲ್ನೋಟಕ್ಕೆ ಕಂಡು ಬಂದಂತೆ, ಪತ್ನಿ ಮತ್ತು ಮಗುವಿಗೆ ವಿಷ ಕುಡಿಸಿ ಬಳಿಕ ಕೃಷ್ಣನಾಯಕ್​ ನೇಣು ಹಾಕಿಕೊಂಡಿದ್ದಾನೆ ಎಂದು ದಾವಣಗೆರೆ ಆರ್​ಎಂಸಿ ಠಾಣಾ ಪೊಲೀಸರು ಹೇಳಿದ್ದಾರೆ.

- Advertisement -