ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಸೊಸೆ ಡಿಂಪಲ್ ಸ್ಪರ್ಧೆ

Prasthutha|

ಲಖನೌ: ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿರುವ ಉತ್ತರ ಪ್ರದೇಶದ ಮೈನ್’ಪುರಿ ಲೋಕಸಭಾ ಕ್ಷೇತ್ರದಿಂದ ಅವರ ಸೊಸೆ, ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿದೆ.

- Advertisement -


ಡಿ. 5 ರಂದು ಉಪ ಚುನಾವಣೆ ನಡೆಯಲಿದ್ದು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾಚವಣೆ ಫಲಿತಾಂಶ ಘೋಷಣೆಯಾಗುವ ಡಿಸೆಂಬರ್ 8 ರಂದೇ ಈ ಕ್ಷೇತ್ರದ ಫಲಿತಾಂಶವೂ ಹೊರ ಬೀಳಲಿದೆ.


ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟರ್ ನಲ್ಲಿ ಇಂದು ‘ಮೈನ್’ಪುರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷವು ಡಿಂಪಲ್ ಯಾದವ್ ರ ಹೆಸರನ್ನು ಅಂತಿಮಗೊಳಿಸಿದೆ” ಎಂದು ತಿಳಿಸಲಾಗಿದೆ.
ಗುರ್ ಗಾಂವ್ ನ ಮೇದಾಂತಾ ಆಸ್ಪತ್ರೆಯಲ್ಲಿ ಅಕ್ಟೋಬರ್ 10ರಂದು 82ರ ಹರೆಯದ ಸಮಾಜವಾದಿ ಪಕ್ಷದ ಅತ್ಯುನ್ನತ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಕೊನೆಯುಸಿರೆಳೆದಿದ್ದರು. ಉತ್ತರ ಪ್ರದೇಶದ ಎಟ್ಟಾವಾ ಜಿಲ್ಲೆಯ ಮುಲಾಯಂರ ಸೈಫೈ ಗ್ರಾಮದಲ್ಲಿ ಸಮಾಜವಾದಿ ಪಕ್ಷದ ಪೋಷಕರಾಗಿದ್ದ ಮುಲಾಯಂ ಸಿಂಗ್ ಯಾದವ್ ರ ಅಂತ್ಯಕ್ರಿಯೆಯನ್ನು ಸರಕಾರೀ ಗೌರವಗಳೊಂದಿಗೆ ನಡೆಸಲಾಗಿತ್ತು.

- Advertisement -


ಸ್ಥಳೀಯರಿಂದ ನೇತಾಜೀ ಎಂದು ಕರೆಸಿಕೊಳ್ಳುತ್ತಿದ್ದ ಮುಲಾಯಂರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಜನರು ಸೇರಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಕೇಂದ್ರದಲ್ಲಿ ರಕ್ಷಣಾ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

Join Whatsapp