ತಾಯಿಯ ನೆನಪುಗಳಿದ್ದ ಮೊಬೈಲ್ ಕೊನೆಗೂ ಪುತ್ರಿಯ ಕೈಸೇರಿತು !

Prasthutha|

ಮಡಿಕೇರಿ: ತಾಯಿಯ ನೆನಪುಗಳಿದ್ದ ಮೊಬೈಲ್ ಕಳವಾದ ಬಳಿಕ ವಿಡಿಯೋ ಮಾಡಿ ಮೊಬೈಲ್ ಗಾಗಿ ಕಳಕಳಿಯ ಮನವಿ ಮಾಡಿದ್ದ ಬಾಲಕಿಗೆ ಮೂರು ತಿಂಗಳ ಬಳಿಕ ಮೊಬೈಲ್ ಸಿಕ್ಕಿದೆ. ಬಾಲಕಿಯ ಹರ್ಷಕ್ಕೆ ಪಾರವೇ ಇಲ್ಲ. ಈ ಮೊಬೈಲ್ ನಲ್ಲಿ ತಾಯಿಯೊಂದಿಗಿರುವ ಹಲವು ಭಾವನಾತ್ಮಕ ಚಿತ್ರಗಳಿವೆ ಎಂದು ಬಾಲಕಿ ಹೇಳಿದ್ದಳು. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಪ್ರಭಾ ಎಂಬವರು ಮೇ 16ರಂದು ಮೃತಪಟ್ಟಿದ್ದರು. ಈ ವೇಳೆ ಪ್ರಭಾ ಅವರ ಬಳಿ ಇದ್ದ ಮೊಬೈಲ್ ಆಸ್ಪತ್ರೆಯಿಂದಲೇ ಕಾಣೆಯಾಗಿತ್ತು.

- Advertisement -

ಆ ಮೊಬೈಲ್ ನಲ್ಲಿ ಪ್ರಭಾ ಹಾಗೂ ಮಕ್ಕಳ ಸಾಕಷ್ಟು ಚಿತ್ರಗಳಿದ್ದವು. ತಾಯಿಯನ್ನು ಕಳೆದುಕೊಂಡ ಪುತ್ರಿ ಹೃತಿಕ್ಷಾ ಅವರು ಮೊಬೈಲ್ ಗಾಗಿ ಎಲ್ಲೆಡೆ ಹುಡುಕಾಡಿದ್ದರು, ಆದೆ ಅದು ಸಿಕ್ಕಿರಲಿಲ್ಲ. ಕೊನೆಗೆ ವೀಡಿಯೋ ಮಾಡಿ, ತಾಯಿ ಉಪಯೋಗಿಸುತ್ತಿದ್ದ ಮೊಬೈಲ್ ಕಾಣೆಯಾಗಿದೆ. ಅದರನ್ನು ತಾಯಿಯ ಮರೆಯಲಾರದ ನೆನಪುಗಳಿವೆ. ದಯವಿಟ್ಟು ಸಿಕ್ಕಿದವರು ಮೊಬೈಲ್ ತಂದು ಕೊಡಿ ಎಂದು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಳು. ಈ ವಿಡಿಯೋ ವೈರಲ್ ಆಗಿತ್ತು. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿ ಆಕೆಗೆ ಮೊಬೈಲ್ ತಂದು ಕೊಡುವುದಾಗಿ ಭರವಸೆ ನೀಡಿದ್ದರು.


ವೀಡಿಯೋ ನೋಡಿದ್ದ ಯುವ ಕಾಂಗ್ರೆಸ್ ನಾಯಕರು ಆಕೆಗೆ ಹೊಸ ಮೊಬೈಲ್ ತಂದು ಕೊಟ್ಟಿದ್ದರು. ಇದೀಗ ಮೂರು ತಿಂಗಳ ಬಳಿಕ ಕಾಣೆಯಾಗಿದ್ದ ಮೊಬೈಲ್ ಅನ್ನು ಪೊಲೀಸರು ಬಾಲಕಿಗೆ ತಂದು ಕೊಟ್ಟಿದ್ದಾರೆ. ಮಡಿಕೇರಿ ಕೋವಿಡ್ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಡಿಕೇರಿ ನಗರ ಠಾಣೆಗೆ ಬಂದು ಮೊಬೈಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೊಬೈಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ದೊರಕಬೇಕಿದೆ.



Join Whatsapp