ನನ್ನ ಮಗಳು 6 ತಿಂಗಳಿನಿಂದ ಕಾಣುತ್ತಿಲ್ಲ: ಮುರುಘಾ ಮಠದ ಆವರಣದಲ್ಲಿ ಅಂಧ ತಂದೆಯ ಆಕ್ರಂದನ

Prasthutha|

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್’ನಲ್ಲಿ ಉಳಿದುಕೊಂಡಿದ್ದ ನನ್ನ ಮಗಳು ಕಳೆದ 6 ತಿಂಗಳಿನಿಂದ ಅಲ್ಲಿಂದ ಕಾಣೆಯಾಗಿದ್ದಾಳೆ ಎಂದು ಮಠದ ಆವರಣದಲ್ಲಿ ರೋದಿಸುತ್ತಿರುವ ಅಂಧ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಇದರ ವಿರುದ್ಧ ಸುಪ್ರೀಮ್ ಕೋರ್ಟ್’ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಅಂಧ ವ್ಯಕ್ತಿಯೊಬ್ಬ, ಪೊಲೀಸ್ ವ್ಯವಸ್ಥೆ ಮತ್ತು ಮಠದ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ತರಗತಿಯ ಕಲಿಯುತ್ತಿರುವ ಮಗಳು ಸಾಕ್ಷಿಯನ್ನು ಕಳೆದ ಹಲವು ತಿಂಗಳಿನಿಂದ ನೋಡಲು ಸಾಧ್ಯವಾಗಲಿಲ್ಲ. ಇದೀಗ ಅವಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ ಎಂಬ ಮಾಹಿತಿ ನೀಡುತ್ತಿದ್ದಾರೆ. ಹಾಸ್ಟೆಲ್’ನಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ತಿಳಿಸಿದರು.



Join Whatsapp