ಮೈಸೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಗರದ ಎಲ್ಲಾ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.
ಕೆಲವು ಮುಖ್ಯರಸ್ತೆಗಳಲ್ಲಿ ಚಪ್ಪರದ ಮಾದರಿಗಳನ್ನು ನಿರ್ಮಿಸಿ, ಅವುಗಳ ಮೇಲೆ ವಿಶೇಷವಾದ ದೀಪಾಲಂಕಾರ ಮಾಡಲಾಗಿದೆ.
ಆದರೆ, ಸಯ್ಯಾಜಿರಾವ್ ರಸ್ತೆಯಲ್ಲಿ ಇದೇ ರೀತಿ ಹಾಕಲಾಗಿರುವ ಚಪ್ಪರವು ಗುಂಬಜ್ ಮಾದರಿಯಲ್ಲಿ ಕಾಣುತ್ತಿದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಈ ಚಪ್ಪರವನ್ನು ಕೂಡಲೇ ಬದಲಾಯಿಸಿ ಎಂದು ಸೂಚಿಸಿದ್ದಾರೆ. ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿರುವ ಅವರು, ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ದೀಪಾಲಂಕಾರಕ್ಕಾಗಿ ನಿರ್ಮಿಸಲಾಗಿರುವ ಚಪ್ಪರವನ್ನು ಕೂಡಲೇ ಬದಲಾಯಿಸುವಂತೆ ಸೂಚಿಸಿದ್ದೇನೆಂದು ಅವರು ತಿಳಿಸಿದ್ದಾರೆ.