ನಟ ದರ್ಶನ್ ಜೈಲು ಸೇರಿದ್ದು ಇದೇ ಮೊದಲಲ್ಲ: 13 ವರ್ಷಗಳ ಬಳಿಕ ‘ದಾಸ’ ಮತ್ತೆ ಜೈಲುಪಾಲು

Prasthutha|

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪರಪ್ಪನ ಅಗ್ರಹಾರ ಸೇರಿದ್ದಾರೆ. ನಟ ದರ್ಶನ್ ಜೈಲು ಸೇರುವುದು ಇದೇ ಮೊದಲಲ್ಲ ಈ ಹಿಂದೆಯೂ ಒಂದು ಬಾರಿ ಜೈಲೂಟ ತಿಂದು ಬಂದವರಾಗಿದ್ದಾರೆ.

- Advertisement -


ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಆರೋಪದಲ್ಲಿ 2011 ಸೆಪ್ಟೆಂಬರ್ 9 ರಂದು ದರ್ಶನ್ ಬಂಧಿತರಾಗಿದ್ದರು. ಈ ಪ್ರಕರಣದಲ್ಲಿ ಅಂದು ವಿಜಯನಗರ ಪೊಲೀಸರು ದರ್ಶನ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ 2011 ಅಕ್ಟೋಬರ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.


ಈಗ ಬರೋಬ್ಬರಿ 13 ವರ್ಷಗಳ ನಂತರ ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಈ ಬಾರಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಮೂಲಕ ನಟ ದರ್ಶನ್ ತಮ್ಮ ಜೀವನದಲ್ಲಿ ಎರಡನೇ ಬಾರಿಗೆ ಜೈಲುವಾಸ ಅನುಭವಿಸುತ್ತಿದ್ದಾರೆ.

Join Whatsapp