ಜಾಮೀನು ಸಿಕ್ಕರೂ ದರ್ಶನ್ ಗೆ ಸಂಕಷ್ಟ: ಹೈಕೋರ್ಟ್ ಷರತ್ತುಗಳೇನು?

Prasthutha|

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಸುಮಾರು 131 ದಿನಗಳಿಂದ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಗೆ ಇಂದು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರಾಗಿದೆ.

- Advertisement -


ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದು, ಸದ್ಯ ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಭಾರೀ ಖುಷಿ ಕೊಟ್ಟಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸದ್ಯ ದರ್ಶನ್ ಗೆ ಆರು ವಾರಗಳ ಕಾಲ ಮಧ್ಯಂತರ ರಿಲೀಫ್ ನೀಡಿದೆ.


ಸದ್ಯ ನಟ ದರ್ಶನ್ ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದರೂ ಸಹ ನೆಮ್ಮದಿಯಿಂದ ಇರುವಂತಿಲ್ಲ. ಯಾಕೆಂದರೆ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಸದ್ಯ ತೀವ್ರ ಬೆನ್ನು ನೋವು ಸಮಸ್ಯೆ ಕಾಡುತ್ತಿದೆ. ಹೀಗಾಗಿ ಮಾನವೀಯತೆ ಆಧಾರದ ಮೇಲೆ ಚಿಕಿತ್ಸೆಗಾಗಿ ನ್ಯಾಯಾಲಯ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನಿಗೆ ಷರತ್ತುಗಳನ್ನು ಸಹ ಹಾಕಲಾಗಿದೆ.

- Advertisement -


ದರ್ಶನ್ ಮಧ್ಯಂತರ ಜಾಮೀನಿಗೆ ಷರತ್ತುಗಳೇನು?

  • ಶಸ್ತ್ರಚಿಕಿತ್ಸೆ ಪಡೆಯುವ ಅಗತ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವಿನ ಆಧಾರದ ಈ ಮಧ್ಯಂತರ ಜಾಮೀನು ಆರು ವಾರ ಚಾಲ್ತಿಯಲ್ಲಿರಲಿದೆ.
  • ದರ್ಶನ್ ಅವರು ತಮ್ಮ ಬೆನ್ನುಹುರಿ ಸಮಸ್ಯೆಗೆ ತಾವು ಇಚ್ಛಿಸಿದ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬಹುದು.
  • ದರ್ಶನ್ ತಮ್ಮ ಪಾಸ್‌ ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ನೀಡಬೇಕು.
  • ಆರೋಗ್ಯ ಪರಿಸ್ಥಿತಿ, ಪ್ರಸ್ತಾವಿತ ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ತದನಂತರದ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಕೋರ್ಟ್ ಗೆ ವರದಿ ಸಲ್ಲಿಸಬೇಕು.



Join Whatsapp