ಕೊಲೆ ಆರೋಪದಲ್ಲಿ ದರ್ಶನ್’ಗೆ ಜೈಲು: ಆತಂಕದಲ್ಲಿ ನಿರ್ಮಾಪಕರು

Prasthutha|

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿದೆ. ದರ್ಶನ್ ವಿರುದ್ಧ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದರೆ ದರ್ಶನ್ ಗೆ ಸುಲಭಕ್ಕೆ ಜಾಮೀನು ಸಿಗುವುದು ಅನುಮಾನ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಿನಿಮಾ ನಿರ್ಮಾಪಕರು ಈ ಪ್ರಕರಣದಿಂದಾಗಿ ತೀವ್ರ ಆತಂಕದಲ್ಲಿದ್ದಾರೆ.

- Advertisement -


ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳವನ್ನು ಸಿನಿಮಾ ನಿರ್ಮಾಪಕರು ಹಾಕಿದ್ದಾರೆ. ಈಗ ದರ್ಶನ್ ಜೈಲು ಪಾಲಾಗಿದ್ದರಿಂದ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ದರ್ಶನ್ ಪ್ರಸ್ತುತ ‘ಡೆವಿಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಈ ಮಧ್ಯೆ ದರ್ಶನ್ ಬಂಧನವಾಗಿದ್ದು, ಪಾಪ ‘ಡೆವಿಲ್’ ನಿರ್ಮಾಪಕರಿಗೆ ದಿಕ್ಕು ತೋಚದಂತಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾಕ್ಕಾಗಿ ದರ್ಶನ್ ಎಸ್ ಹೇಳಿದ್ದರು. ಸೂರಪ್ಪ ಬಾಬು ಸಹ ದರ್ಶನ್ ಜೊತೆ ಸಿನಿಮಾ ಮಾಡಲು ಹಣಕಾಸಿನ ಹೊಂದಾಣಿಕೆಯಲ್ಲಿ ತೊಡಗಿದ್ದರು ಎನ್ನಲಾಗುತ್ತಿದೆ. ಈಗ ಈ ಸಿನಿಮಾ ಸಹ ಬಂದ್ ಆಗಲಿದೆ.

Join Whatsapp