ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಆತ್ಮಹತ್ಯೆ

Prasthutha|

ಬೆಂಗಳೂರು: ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರ್ಶನ್‌ ಬಳಿ ಹಲವು ವರ್ಶಗಳಿಂದ ಕೆಲಸ ಮಾಡಿಕೊಂಡಿದ್ದ ಶ್ರೀಧರ್‌ (35) ವಿಷ ಸೇವಿಸಿ ಏ.17 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

ಆತ ಕಾಣೆಯಾಗಿದ್ದಾರೆಂ ಎಲ್ಲರೂ ಭಾವಿಸಿದ್ದರು.

ಶ್ರೀಧರ್ ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

ಒಂಟಿತನ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿದೆ. ಶ್ರೀಧರ್ ಮೃತ ದೇಹ ಕಂಡು ಮ್ಯಾನೇಜರ್ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದರಂತೆ.

ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಶ್ರೀಧರ್ ಮೃತದೇಹ ಕಲ್ಲು ಬಂಡೆ ಮೇಲೆ ಪತ್ತೆಯಾಗಿತ್ತು.

Join Whatsapp