ಮಂಗಳೆಯ ನೆರಳಲ್ಲಿ ಕಿರಾತಕರ ಕರಾಳತೆ, ವ್ಯವಹಾರ ನಿಷೇಧ ಫಲಿಸದು: ಕೆ. ಅಶ್ರಫ್

Prasthutha|

ಮಂಗಳೂರು: ಕರಾವಳಿಯ ಮಂಗಳಾ ದೇವಸ್ಥಾನಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. 800 ವರ್ಷಗಳ ಇತಿಹಾಸವಿರುವ ಪ್ರಾಚೀನ ಆರಾಧನಾ ಸ್ಥಳವನ್ನು ದ್ವೇಷ ಸಾಧನೆಗೆ ಬಳಸುವ ಸಂಘೀ ಕಿರಾತಕರ ಶ್ರಮ ಎಂದಿಗೂ ಫಲಕಾರಿಯಾಗದು ಎಂದು ಮಾಜಿ ಮೇಯರ್ ಕೆ. ಅಶ್ರಫ್ ಹೇಳಿದ್ದಾರೆ.

- Advertisement -

ಈ ಶೃದ್ದಾ ಕೇಂದ್ರ ಈ ನಾಡಿನ ಅನಂತ ವೈವಿಧ್ಯತೆ ಮತ್ತು ಸಾಮರಸ್ಯದ ಸಂಕೇತವಾಗಿ ಉಳಿದುಕೊಂಡಿದೆ. ಶ್ರೀ ಮಂಗಳೆಯ ಊರಿನ ನಾಮಕರಣಕ್ಕೆ ಮುಸ್ಲಿಮರ ವಿಶೇಷ ಕೊಡುಗೆ ಇದೆ. ಮಂಗಳಾಪುರಮ್ ಎಂಬ ಉಚ್ಚಾರಣೆಗೆ ದಕ್ಷಿಣ ಭಾರತದ ವ್ಯಾಪಾರಿ ಮುಸ್ಲಿಮ್ ಸಮುದಾಯದ ಕೊಡುಗೆ ಇದೆ. ಇಂತಹ ಪ್ರಮುಖ ಆಸ್ತಿಕ ಕೇಂದ್ರಕ್ಕೆ ವಿವಾದವನ್ನು ಎಳೆದು ಹಾಕುವ ಸಂಘೀ ಪ್ರಯತ್ನ ಎಂದೂ ಫಲಿಸದು ಎಂದು ಅಶ್ರಫ್ ತಿಳಿಸಿದ್ದಾರೆ.

ಮುಸ್ಲಿಮ್ ವ್ಯಾಪಾರಿಗಳೊಂದಿಗೆ ನಿಷೇಧ ಕರೆ ನೀಡಿದ ಶರಣ್ ತನ್ನ ಕರೆಯನ್ನು ಜಿಲ್ಲೆಯ ಅಷ್ಟೂ ವ್ಯವಹಾರ ಮಳಿಗೆಗಳಿಗೆ ವಿಸ್ತರಿಸಿ ಅಲ್ಲಿಗೆ ಭೇಟಿ ನೀಡುವ ಮುಸ್ಲಿಮ್ ಗ್ರಾಹಕರಿಗೆ ಅನ್ವಯಿಸುವ ಪ್ರಸ್ತಾಪ ಮಾಡಿ ನೋಡಲಿ. ವರ್ತಕರನ್ನು ಮತ್ತು ಗ್ರಾಹಕರನ್ನು ಮತೀಯ ದೃಷ್ಟಿಯಲ್ಲಿ ತಾರತಮ್ಯಗೊಳಿಸುವುದು ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಆಗಿದೆ. ಜಿಲ್ಲೆಯಲ್ಲಿ ಯಾವುದೇ ಮೂಲದಿಂದಾದರೂ ಮತೀಯ ವಿದ್ವೇಷ ಉಲ್ಬಣಗೊಳಿಸಲು ಶರಣ್ ನನ್ನು ಸಂಘಿಗಳು ಬಳಸುತ್ತಿರುವುದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಅರಿಯಬೇಕಿದೆ. ಸಂಘೀ ಶರಣನು ಸಾಧ್ಯವಾದರೆ ತನ್ನ ಧ್ವಜ ಸ್ಥಾಪನೆಯನ್ನು ತಾನು ಮ್ಯಾನ್ ಪವರ್ ನಡೆಸುತ್ತಿರುವ ಮಾಲ್, ಆಸ್ಪತ್ರೆ ಸಂಸ್ಥೆಗಳಿಗೆ ವಿಸ್ತರಿಸಿ ನೋಡಲಿ.ಅಲ್ಲಿನ ನಿರ್ಧಿಷ್ಟ ಸಮುದಾಯದ ಗ್ರಾಹಕರನ್ನು ನಿಷೇಧಿಸುವ ಅಭಿಯಾನ ನಡೆಸಿ ಪರಿಣಾಮ ನೋಡಲಿ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರೂ ಆದ ಕೆ. ಅಶ್ರಫ್ ಸವಾಲ್ ಹಾಕಿದ್ದಾರೆ.