ಮನುವಾದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಹಾಕಿದ ದಲಿತ ಸಂಘಟನೆ

Prasthutha|

ಬೆಂಗಳೂರು: ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾರಂಭದಲ್ಲಿ ಸಾವಿರಾರು ಜನರು ಸೇರಿದ್ದರೂ ಕನ್ನಡ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡದ್ದನ್ನು ಖಂಡಿಸಿ ದಲಿತ ವಿರೋಧಿ ಮನುವಾದಿ ಕನ್ನಡ ನ್ಯೂಸ್ ಮಾಧ್ಯಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಾರ್ವಜನಿಕವಾಗಿ ಬ್ಯಾನರ್ ಅಳವಡಿಸಿದ ಘಟನೆ ಚಾಮರಾಜನಗರದ  ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ನಡೆದಿದೆ.

- Advertisement -

ದಲಿತ ಪರ ಹೋರಾಟವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದ ಕನ್ನಡ ನ್ಯೂಸ್ ಮಾಧ್ಯಮಗಳ ವಿರುದ್ಧ ಆಕ್ರೋಶಗೊಂಡು ಸತ್ತೇಗಾಲ ಪರಿಸರದ ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಸದಸ್ಯರು  ಈ ಬ್ಯಾನರ್ ಅಳವಡಿಸಿದ್ದಾರೆ. ದಲಿತರೆಲ್ಲರೂ ಮನುವಾದಿ ಮಾಧ್ಯಮಗಳನ್ನು ಬಹಿಷ್ಕರಿಸಬೇಕೆಂದು ಯುವಕ ಸಂಘ ಕರೆ ನೀಡಿದೆ.

ನಮ್ಮನ್ನು ನೀವು ಗೌರವಿಸಲಿಲ್ಲವೆಂದರೆ ನಿಮ್ಮನ್ನು ನಾವೇಕೆ ಗೌರವಿಸಬೇಕು? ನಮ್ಮ ಮನೆಯೊಳಗೇಕೆ ನಿಮ್ಮನ್ನು ಏಕೆ ಬಿಟ್ಟುಕೊಳ್ಳಬೇಕು? ಎಂದು ಬರಹಗಾರ, ಸಾಹಿತಿ ರಘೋತ್ತಮ ಹೊ.ಬ ಟ್ವೀಟ್ ಮಾಡಿದ್ದಾರೆ.

https://twitter.com/raghothamahoba/status/1495996756173389824?s=20&t=C-p2qvck7yADSmx6Ap72Lg
Join Whatsapp