ಗುವಾಹಟಿ: ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ ಪ್ರಕರಣದಲ್ಲಿ ಅಸ್ಸಾಂನ ಮತ್ತೊಂದು ನ್ಯಾಯಾಲಯವು ಜಾಮೀನು ನೀಡಿದ ನಂತರ ಮೆವಾನಿ ಅವರನ್ನು ಎಪ್ರಿಲ್ 25 ರಂದು ಹಲ್ಲೆ ಆರೋಪದಲ್ಲಿ ಮರು ಬಂಧಿಸಲಾಗಿತ್ತು.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮೇವಾನಿ ವಿರುದ್ಧ ಎರಡನೇ ಪ್ರಕರಣವನ್ನು ಏಪ್ರಿಲ್ 21ರಂದು ದಾಖಲಿಸಲಾಗಿತ್ತು. ನ್ಯಾಯಾಲಯ ಐದು ದಿನಗಳ ನ್ಯಾಯಂಗ ಬಂಧಿನಕ್ಕೆ ಒಪ್ಪಿಸಿತ್ತು. ಇಂದು ಜಾಮೀನು ಮಂಜೂರು ಮಾಡಲಾಗಿದೆ.
ಇದು ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಷಡ್ಯಂತ್ರ. ಅವರು ನನ್ನ ಇಮೇಜ್ಗೆ ಧಕ್ಕೆ ತರಲು ಇದನ್ನು ಮಾಡಿದ್ದಾರೆ ಎಂದು ಮೇವಾನಿ ಟ್ವೀಟ್ ಪ್ರಕರಣದಲ್ಲಿ ಜಾಮೀನು ಪಡೆದ ದಿನ ತಿಳಿಸಿದ್ದಾರೆ.