ಉ.ಪ್ರ. : ಶಾಲಾ ಪರೀಕ್ಷೆ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ

Prasthutha|

ಲಖನೌ : ಶಾಲಾ ಪರೀಕ್ಷೆ ಶುಲ್ಕ ಪಾವತಿಸಲು ಸಾಧ್ಯವಾಗದೆ ದಲಿತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಬಾಬೆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

ಡಿ.21ರಂದು ಶಾಲೆಯಲ್ಲಿ ತನ್ನ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದುದಕ್ಕೆ ಬಾಲಕಿ ಖಿನ್ನತೆಗೊಳಗಾಗಿದ್ದಳು. ವಿದ್ಯಾರ್ಥಿನಿ ಶುಲ್ಕ ಪಾವತಿಸದ ಕಾರಣ, ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.

ಬಾಲಕಿಯ ತಂದೆ ನೀಡಿರುವ ದೂರಿನಲ್ಲಿ, ತಮ್ಮ ಮಗಳ ಸಾವಿಗೆ ಶಾಲಾಡಳಿತವನ್ನು ಹೊಣೆಯಾಗಿಸಿದ್ದಾರೆ. ಈ ಸಂಬಂಧ ಎಫ್ ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.  



Join Whatsapp