ಮಧ್ಯಪ್ರದೇಶದಲ್ಲಿ ದಲಿತ ದಂಪತಿ, ಮಗನ ಕೊಲೆ

Prasthutha|

ಭೋಪಾಲ್: ಮಧ್ಯಪ್ರದೇಶದ ದಾಮೋಹ್ ನಲ್ಲಿ ದಲಿತ ದಂಪತಿ ಮತ್ತು ಅವರ ಮಗನನ್ನು ಆರು ಮಂದಿ ದುಷ್ಕರ್ಮಿಗಳ ಗುಂಪೊಂದು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

- Advertisement -

ಆ ದಂಪತಿಯ ಇನ್ನಿಬ್ಬರು ಮಕ್ಕಳು ಘಟನೆಯಲ್ಲಿ ಗಾಯಗೊಂಡಿದ್ದಾರೆ. ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವ್ರಾನ್ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಳಿಗ್ಗೆ ಆರೂವರೆ ಗಂಟೆಗೆ ಈ ಕೊಲೆ ನಡೆದಿದೆ. ಜಿಲ್ಲಾ ಕೇಂದ್ರದಿಂದ ಘಟನೆ ನಡೆದ ಸ್ಥಳ 20 ಕಿಲೋಮೀಟರ್ ದೂರದಲ್ಲಿದೆ ಎಂದು ಎಸ್ ಪಿ ಡಿ. ಆರ್. ತೇನಿವರ್ ತಿಳಿಸಿದ್ದಾರೆ.

- Advertisement -

ನಾಪತ್ತೆಯಾಗಿರುವ ಆರು ಜನ  ಆರೋಪಿಗಳಿಗೆ ಬಲೆ ಬೀಸಲಾಗಿದೆ. ಕ್ಷುಲ್ಲಕ ವಿವಾದಕ್ಕಾಗಿ ಈ ಕೊಲೆಗಳು ನಡೆದಿವೆ. ಆರೋಪಿಗಳು ಅದೇ ಊರಿನವರಾಗಿದ್ದಾರೆ. 60 ಮತ್ತು 58ರ ಪ್ರಾಯದ ದಲಿತ ದಂಪತಿ ಮತ್ತು ಅವರ 32ರ ಪ್ರಾಯದ ಮಗ ಕೊಲೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅವರ 28 ಮತ್ತು 30ರ ಪ್ರಾಯದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಕೊಲೆ ಮತ್ತು ದಲಿತರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಗಳಡಿ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತಂಡ ರಚಿಸಿ ಪರಾರಿ ಆರೋಪಿಗಳ ಹುಡುಕಾಟ ನಡೆದಿದೆ.

Join Whatsapp