‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’: ಡಾಲಿ ಧನಂಜಯ್ ಗೆ ಬೆಂಬಲದ ಮಹಾಪೂರ

Prasthutha|

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯ ಮತ್ತು ನಿರ್ಮಾಣದ ‘ಹೆಡ್ ಬುಶ್’ ಚಿತ್ರ ಈಗಾಗಲೇ ರಾಷ್ಟ್ರಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -


ಆದರೆ ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ವಿವಾದವೆಬ್ಬಿಸುತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಧನಂಜಯ್ ಗೆ ಅಭಿಮಾನಿಗಳ ಬೆಂಬಲದ ಮಹಾಪೂರವೇ ಹರಿದುಬರುತ್ತಿದ್ದು. #westandwithdhananjay ಎನ್ನುವ ಹೆಸರಿನ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.

- Advertisement -


ಜೊತೆಗೆ “ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ” ಎನ್ನುವ ಡಯಲಾಗ್ ಕೂಡಾ ವೈರಲ್ ಆಗುತ್ತಿದೆ.


ಚಿತ್ರಗಳಿಗೆ ಧಾರ್ಮಿಕ ಲೇಪನ ನೀಡಿ ಬಹಿಷ್ಕಾರ ಹಾಕುವ ಸಂಘಪರಿವಾರದ ಕುಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೂಡ ವ್ಯಕ್ತವಾಗಿದೆ.
ಇನ್ನು ವೀರಗಾಸೆಗೆ ಅವಮಾನ ಆಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಚಿತ್ರದುರ್ಗದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Join Whatsapp